Acharya Chanakya (ಚಾಣಕ್ಯ) was an Indian scholar, political counselor, philosopher, and teacher who was also known by the name of Kautilya or Vishnu Gupta. Chanakya served as Prime Minister during Chandragupta Maurya’s reign. He is mostly famous for being the author of the political book Arthashastra, which he authored for the younger Chandragupta as a kind of instructional booklet on how to rule successfully.
Arthashastra and Neeti Shastra are two of his well-known works. His books, which he wrote a very long time ago, contain timeless concepts. Even today, his ideas from Chanakya Neeti are taught to management students and business executives.
We have collected Chanakya quotes in Kannada & we hope they provide you with valuable insights that you may apply to your career and personal life.
Chanakya Quotes In Kannada
Motivational and Powerful Chanakya quotes in Kannada
1. Sadhisuva munna hasyavagi noduttare, sadhisida mele visheshavagi noduttare.
Addarinda nivu enu andukondiddiro adannu ardhadalli kai bidabedi.
ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ, ಸಾಧಿಸಿದ ಮೇಲೆ ವಿಶೇಷವಾಗಿ ನೋಡುತ್ತಾರೆ.
ಆದ್ದರಿಂದ ನೀವು ಏನು ಅಂದುಕೊಂಡಿದ್ದೀರೋ ಅದನ್ನು ಅರ್ಧದಲ್ಲಿ ಕೈ ಬಿಡಬೇಡಿ..
2. Sada udyoga shilaragiruvavarige badatana baruvudilla, sada paramatmana dhyana maduvavanige papa baruvudilla, maunavagiddare kalaha baruvudilla, hageye sada jagarukateyinda iruvavanige bhayavembude illa.
ಸದಾ ಉದ್ಯೋಗ ಶೀಲರಾಗಿರುವವರಿಗೆ ಬಡತನ ಬರುವುದಿಲ್ಲ, ಸದಾ ಪರಮಾತ್ಮನ ಧ್ಯಾನ ಮಾಡುವವನಿಗೆ ಪಾಪ ಬರುವುದಿಲ್ಲಾ, ಮೌನವಾಗಿದ್ದರೆ ಕಲಹ ಬರುವುದಿಲ್ಲಾ, ಹಾಗೆಯೇ ಸದಾ ಜಾಗರೂಕತೆಯಿಂದ ಇರುವವನಿಗೆ ಭಯವೆಂಬುದೆ ಇಲ್ಲ.
3. Nivu huttuvaga enu iralilla adare sayuvaga nimma hesarinondige sayuttiri
nimma hesaru bari aksharagalinda kudiddare saladu adaralli ondu itihasa irabeku.
ನೀವು ಹುಟ್ಟುವಾಗ ಏನು ಇರಲಿಲ್ಲ ಆದರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ, ನಿಮ್ಮ ಹೆಸರು ಬರಿ ಅಕ್ಷರಗಳಿಂದ ಕೂಡಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.
4. Orva vyakti tanna karmagalindale dodda vyakti aguttaneye vinah huttinindalla
ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ
5. Ondu doshavu aneka gunagalannu nunguvudu
ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು
Also Read: 55+ Swami Vivekananda quotes in Kannada
6. Bhiti hattiravaguttiruva sulivu sikkida kudale akramana madi adannu nasa madu
ಭೀತಿ ಹತ್ತಿರವಾಗುತ್ತಿರುವ ಸುಳಿವು ಸಿಕ್ಕಿದ ಕೂಡಲೇ ಆಕ್ರಮಣ ಮಾಡಿ ಅದನ್ನು ನಾಶ ಮಾಡು
7. Atma vishvasa ondiddare entaha paristhitiyallu tale etti nillabahudu.
ಆತ್ಮ ವಿಶ್ವಾಸ ಒಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಲ್ಲಬಹುದು.
8. Yava manushyanu tanna guttina vishayagalannu ellareduru helikolluttano avanu avanu iruveya gudalli havu sikkidante sayuttane.
ಯಾವ ಮನುಷ್ಯನು ತನ್ನ ಗುಟ್ಟಿನ ವಿಷಯಗಳನ್ನು ಎಲ್ಲರೆದುರು ಹೇಳಿಕೊಳ್ಳುತ್ತಾನೋ ಅವನು ಇರುವೆಯ ಗೂಡಲ್ಲಿ ಹಾವು ಸಿಕ್ಕಿದಂತೆ ಸಾಯುತ್ತಾನೆ.
9. Chanakya prakara yasassu, kirti mattu gaurava benne mele nadeyo hage yarige nadeyo tantra gottirutto avarige yasassu sigutte.
ಚಾಣಕ್ಯನ ಪ್ರಕಾರ ಯಶಸ್ಸು, ಕೀರ್ತಿ ಮತ್ತು ಗೌರವ ಬೆಣ್ಣೆ ಮೇಲೆ ನಡೆಯೋ ಹಾಗೆ ಯಾರಿಗೆ ನಡೆಯೋ ತಂತ್ರ ಗೊತ್ತಿರುತ್ತೋ ಅವರಿಗೆ ಯಶಸ್ಸು ಸಿಗುತ್ತೆ .
10. Dustanige avamanada bhayavilla
buddhivantanige jeevanada bhayavilla
indriyagalannu nigrahisidavarige vishayagala bhayavilla
krtakrtyarige maranabhayavilla
ದುಷ್ಟನಿಗೆ ಅವಮಾನದ ಭಯವಿಲ್ಲ
ಬುದ್ಧಿವಂತನಿಗೆ ಜೀವನದ ಭಯವಿಲ್ಲ
ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ
ಕೃತಕೃತ್ಯರಿಗೆ ಮರಣ ಭಯವಿಲ್ಲ
Chanakya quotes on Money in Kannada
11. Elli hanaviruttado alli mitra,
elli hanaviruttado alli bandhavaru,
elli hanaviruttado alli yasassu
hanaviddavanu ellarannu akarsisuttane,
hanaviddavanu matra e prapancadalli jivisuttane.
ಎಲ್ಲಿ ಹಣವಿರುತ್ತದೋ ಅಲ್ಲಿ ಮಿತ್ರ, ಎಲ್ಲಿ ಹಣವಿರುತ್ತದೋ ಅಲ್ಲಿ ಬಾಂಧವರು, ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು ಹಣವಿದ್ದವನು ಎಲ್ಲರನ್ನು ಆಕರ್ಷಿಸುತ್ತಾನೆ, ಹಣವಿದ್ದವನು ಮಾತ್ರ ಈ ಪ್ರಪಂಚದಲ್ಲಿ ಜೀವಿಸುತ್ತಾನೆ.
12. Vishva kurudagi gauravisuvudu duddanna mattu shrimanta janaranna
ವಿಶ್ವ ಕುರುಡಾಗಿ ಗೌರವಿಸುವುದು ದುಡ್ಡನ್ನ ಮತ್ತು ಶ್ರೀಮಂತ ಜನರನ್ನ
13. Alate miri madida sala,
adduriyinda madida maduve,
saralate miri torikeya baduku,
atiyagi obbara meliruva nambike,
aparavada priti nambike.
Idu yavattu olledalla
ಅಳತೆ ಮೀರಿ ಮಾಡಿದ ಸಾಲ,
ಅದ್ದೂರಿಯಿಂದ ಮಾಡಿದ ಮದುವೆ,
ಸರಳತೆ ಮೀರಿ ತೋರಿಕೆಯ ಬದುಕು,
ಅತಿಯಾಗಿ ಒಬ್ಬರ ಮೇಲಿರುವ ನಂಬಿಕೆ,
ಅಪಾರವಾದ ಪ್ರೀತಿ ನಂಬಿಕೆ.
ಇದು ಯಾವತ್ತು ಒಳ್ಳೇದಲ್ಲ
14. Hanavillada purusanannu vesye toreyuttale,
sota rajanannu prajegalu toreyuttare,
hannu bidada maravannu paksigalu toreyuttave,
prapancadalli ellaru tanna labhavanne noduttare,
elliyavarege nammalli janarige bekaddu ideyo
alliyavarege matra namage bele…
ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ,
ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ,
ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ ,
ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ,
ಎಲ್ಲಿಯವರೆಗೆ ನಮ್ಮಲ್ಲಿ ಜನರಿಗೆ ಬೇಕಾದ್ದು ಇದೆಯೋ
ಅಲ್ಲಿಯವರೆಗೆ ಮಾತ್ರ ನಮಗೆ ಬೆಲೆ …
Chanakya quotes on honesty and trust in Kannada
15. Ati pramanikaragabedi, ekendare neravagiruva maragalu modalu nelakkuruluttave,
anantara doṅku marada saradi
ಅತಿ ಪ್ರಾಮಾಣಿಕರಾಗಬೇಡಿ ಏಕೆಂದರೆ ನೇರವಾಗಿರುವ ಮರಗಳು ಮೊದಲು ನೆಲಕ್ಕುರುಳುತ್ತವೆ, ಆನಂತರ ಡೊಂಕು ಮರದ ಸರದಿ…
16. Asaparanada karyadaksanannu mosagolisuvudu sulabha
ಆಶಾಪರನಾದ ಕಾರ್ಯದಕ್ಷನನ್ನೂ ಮೋಸಗೊಳಿಸುವುದು ಸುಲಭ
17. Tumba niyattagidre olledalla, niyattagiro manushyaranna ata adisutte prapancha.
ತುಂಬ ನಿಯತ್ತಾಗಿದ್ರೆ ಒಳ್ಳೇದಲ್ಲ, ನಿಯತ್ತಾಗಿರೋ ಮನುಷರನ್ನ ಆಟ ಆಡಿಸುತ್ತೆ ಪ್ರಪಂಚ.
18. Shramapattu pramanikavagi kelasa maduvavare konegu atyanta santosadinda iruttare.
ಶ್ರಮಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಕೊನೆಗೂ ಅತ್ಯಂತ ಸಂತೋಷದಿಂದ ಇರುತ್ತಾರೆ.
Chanakya quotes on Enemy in Kannada
19. Shatruvannu avana marmadalli hodeyabeku
ಶತ್ರುವನ್ನು ಅವನ ಮರ್ಮದಲ್ಲಿ ಹೊಡೆಯಬೇಕು
20. Yara bagge ninage dvesavideyo avana bali madhuravagi mattu hitavagi matanadu.
ಯಾರ ಬಗ್ಗೆ ನಿನಗೆ ದ್ವೇಷವಿದೆಯೋ ಅವನ ಬಳಿ ಮಧುರವಾಗಿ ಮತ್ತು ಹಿತವಾಗಿ ಮಾತನಾಡು.
21. Shnehitarannu hattira ittukolli
adare nimma satrugalannu innu hattiradinda gamanisi.
ಸ್ನೇಹಿತರನ್ನು ಹತ್ತಿರ ಇಟ್ಟುಕೊಳ್ಳಿ
ಆದರೆ ನಿಮ್ಮ ಶತ್ರುಗಳನ್ನು ಇನ್ನು ಹತ್ತಿರದಿಂದ ಗಮನಿಸಿ.
22. Satruvannu sabheyalli endigu nindisabaradu
ಶತ್ರುವನ್ನು ಸಭೆಯಲ್ಲಿ ಎಂದಿಗೂ ನಿಂದಿಸಬಾರದು.
Also Read : 55+ Basavanna vachanagalu in Kannada
23. Neravagi mataduvavarige satrugalu jasti,
sullu heluvavarige mitraru jasti,
svarthakkagi candada matugalannu aduvavaru jasti,
nisvartha manassinavarige novu jasti.
ನೇರವಾಗಿ ಮಾತಾಡುವವರಿಗೆ ಶತ್ರುಗಳು ಜಾಸ್ತಿ,
ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ,
ಸ್ವಾರ್ಥಕ್ಕಾಗಿ ಚಂದದ ಮಾತುಗಳನ್ನು ಆಡುವವರು ಜಾಸ್ತಿ,
ನಿಸ್ವಾರ್ಥ ಮನಸ್ಸಿನವರಿಗೆ ನೋವು ಜಾಸ್ತಿ.
24. Tanage haniyaguva sandarbhadalli sandhiynu madikollabeku
ತನಗೆ ಹಾನಿಯಾಗುವ ಸಂದರ್ಭದಲ್ಲಿ ಸಂಧಿಯ್ನು ಮಾಡಿಕೊಳ್ಳಬೇಕು..
25. Ondede sandhana nadesuttaladaru shatrgala prayatnavannu nirikshisuttirabeku
ಒಂದೆಡೆ ಸಂಧಾನ ನಡೆಸುತ್ತಲಾದರೂ ಶತೃಗಳ ಪ್ರಯತ್ನವನ್ನು ನಿರೀಕ್ಷಿಸುತ್ತಿರಬೇಕು
26. Shatrvina duhkhavu keluvudakke impu.
ಶತೃವಿನ ದುಃಖವು ಕೇಳುವುದಕ್ಕೆ ಇಂಪು
27. Aduge maduvaga navu beṅkiya munde irutteveye horatu beṅkiya melalla.
ಅಡುಗೆ ಮಾಡುವಾಗ ನಾವು ಬೆಂಕಿಯ ಮುಂದೆ ಇರುತ್ತೇವೆಯೇ ಹೊರತು ಬೆಂಕಿಯ ಮೇಲಲ್ಲ .
28. Dusthanige avamanada bhayavilla
buddhivantanige jivanada bhayavilla
indriyagalannu nigrahisidavarige vishayagala bhayavilla
krtakrtyarige maranabhayavilla
ದುಷ್ಟನಿಗೆ ಅವಮಾನದ ಭಯವಿಲ್ಲ
ಬುದ್ಧಿವಂತನಿಗೆ ಜೀವನದ ಭಯವಿಲ್ಲ
ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ
ಕೃತಕೃತ್ಯರಿಗೆ ಮರಣಭಯವಿಲ್ಲ
29. Durjana mattu sarpada ayke bandaga sarpada ayke madikollabeku ekendare sarpavu tanna rakshanege matra kaccuttade, adare durjanaru yavagalu visaya karuttiruttare.
ದುರ್ಜನ ಮತ್ತು ಸರ್ಪದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು ಏಕೆಂದರೆ ಸರ್ಪವು ತನ್ನ ರಕ್ಷಣೆಗೆ ಮಾತ್ರ ಕಚ್ಚುತ್ತದೆ, ಆದರೆ ದುರ್ಜನರು ಯಾವಾಗಲೂ ವಿಷಯ ಕಾರುತ್ತಿರುತ್ತಾರೆ.
30. Havige halu kudisuvudu vishavannu belesuvude horatu amrtavagalaradu
ಹಾವಿಗೆ ಹಾಲು ಕುಡಿಸುವುದು, ವಿಷವನ್ನು ಬೆಳೆಸುವುದೇ ಹೊರತು ಅಮೃತವಾಗಲಾರದು
31. Vishayukta havu kuda modalu tannalli vishavide endu bahiraṅgapadisuvudilla adare tanu apayadalliruva munsuchane tilida kudale eraguvudu
hage manushyanu tanna saktiyannu bekadaga upayogisabeku.
ವಿಷಯುಕ್ತ ಹಾವು ಕೂಡ ಮೊದಲು ತನ್ನಲ್ಲಿ ವಿಷವಿದೆ ಎಂದು ಬಹಿರಂಗಪಡಿಸುವುದಿಲ್ಲ ಆದರೆ ತಾನು ಅಪಾಯದಲ್ಲಿರುವ ಮುನ್ಸೂಚನೆ ತಿಳಿದ ಕೂಡಲೇ ಎರಗುವುದು ಹಾಗೆ ಮನುಷ್ಯನು ತನ್ನ ಶಕ್ತಿಯನ್ನು ಬೇಕಾದಾಗ ಉಪಯೋಗಿಸಬೇಕು.
Chanakya quotes in Kannada on truth
32. Satyaviddaru nambalaradudannu helabaradu
ಸತ್ಯವಿದ್ದರೂ ನಂಬಲಾರದುದನ್ನು ಹೇಳಬಾರದು
33. Sarala svabhavada manushyanu durlabha
ಸರಳ ಸ್ವಭಾವದ ಮನುಷ್ಯನು ದುರ್ಲಭ
Chanakya quotes in Kannada for Bussiness
34. Dharmarthagala viruddha vartisuvavanu anarthavannu honduttane
ಧರ್ಮಾರ್ಥಗಳ ವಿರುದ್ಧ ವರ್ತಿಸುವವನು ಅನರ್ಥವನ್ನು ಹೊಂದುತ್ತಾನೆ
Chanakya quotes on to lead a successful life in Kannada
35. Aviveki janarige salahe madabedi nivu avarannu saripadisalu sahaya maduttene andu kondare adu nimma murkhatana.
ಅವಿವೇಕಿ ಜನರಿಗೆ ಸಲಹೆ ಮಾಡಬೇಡಿ ನೀವು ಅವರನ್ನು ಸರಿಪಡಿಸಲು ಸಹಾಯ ಮಾಡುತ್ತೇನೆ ಅಂದುಕೊಂಡರೆ ಅದು ನಿಮ್ಮ ಮೂರ್ಖತನ .
36. Bereyavara tappugalinda kaliyiri ella tappugalannu maduvastu ayassu nimagilla
ಬೇರೆಯವರ ತಪ್ಪುಗಳಿಂದ ಕಲಿಯಿರಿ ಎಲ್ಲಾ ತಪ್ಪುಗಳನ್ನು ಮಾಡುವಷ್ಟು ಆಯಸ್ಸು ನಿಮಗಿಲ್ಲಾ
37. Buddhivantanige jeevanada bhayavilla
ಬುದ್ಧಿವಂತನಿಗೆ ಜೀವನದ ಭಯವಿಲ್ಲ
38. Ivattina sole, naleya geluvu..
ಇವತ್ತಿನ ಸೋಲೇ, ನಾಳೆಯ ಗೆಲುವು..
39. Gatakalada sokavagali, bhavishyada cinteyagalu ninnannu badhisadirali, vartamanadalli enu madabeko adara bagge alocane madu
ಗತಕಾಲದ ಶೊಕವಾಗಲಿ, ಭವಿಷ್ಯದ ಚಿಂತೆಯಾಗಲು ನಿನ್ನನ್ನು ಬಾಧಿಸದಿರಲಿ, ವರ್ತಮಾನದಲ್ಲಿ ಏನು ಮಾಡಬೇಕೋ ಅದರ ಬಗ್ಗೆ ಆಲೋಚನೆ ಮಾಡು..
40. Durbala vyaktiyannu gamanisi nirlaksisa bedi ekendare avaru ellariginta ati hecchina sedina manobhavane hondiruttare mattu adakkagiye avanisuttare.
ದುರ್ಬಲ ವ್ಯಕ್ತಿಯನ್ನು ಗಮನಿಸಿ, ನಿರ್ಲಕ್ಷಿಸಬೇಡಿ ಏಕೆಂದರೆ ಅವರು ಎಲ್ಲರಿಗಿಂತ ಅತಿ ಹೆಚ್ಚಿನ ಸೇಡಿನ ಮನೋಭಾವನೆ ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಅವಣಿಸುತ್ತಾರೆ.
41. Hanavillada purushanannu veshye toreyuttale,
sota rajanannu prajegalu toreyuttare,
hannu bidada maravannu paksigalu toreyuttave,
prapancadalli ellaru tanna labhavanne noduttare,
elliyavarege nammalli janarige bekaddu ideyo
alliyavarege matra namage bele…
ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ,
ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ,
ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ ,
ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ,
ಎಲ್ಲಿಯವರೆಗೆ ನಮ್ಮಲ್ಲಿ ಜನರಿಗೆ ಬೇಕಾದ್ದು ಇದೆಯೋ
ಅಲ್ಲಿಯವರೆಗೆ ಮಾತ್ರ ನಮಗೆ ಬೆಲೆ …
42. Nimma rahasyavannu yarigu helabedi ave nimage muluvaguttave.
ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ ಅವೇ ನಿಮಗೆ ಮುಳುವಾಗುತ್ತವೆ.
43. Visvada atyanta dodda sakti endare ondu yuva sakti mattondu yuvatiya saundarya
ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಒಂದು ಯುವ ಶಕ್ತಿ ಮತ್ತೊಂದು ಯುವತಿಯ ಸೌಂದರ್ಯ
44. Devaru vigrahadolagilla nimma bhavanegale devaru nimma atmave devasthana
ದೇವರು ವಿಗ್ರಹದೊಳಗಿಲ್ಲಾ ನಿಮ್ಮ ಭಾವನೆಗಳೇ ದೇವರು ನಿಮ್ಮ ಆತ್ಮವೇ ದೇವಸ್ಥಾನ
45. Kai uguru hagu kombu haritavagiruva pranigalannu nambidavaru kasta edurisabekaguttade.
ಕೈ ಉಗುರು ಹಾಗೂ ಕೊಂಬು ಹರಿತವಾಗಿರುವ ಪ್ರಾಣಿಗಳನ್ನು ನಂಬಿದವರು ಕಷ್ಟ ಎದುರಿಸಬೇಕಾಗುತ್ತದೆ.
46. Nirinalli enne, vivekiyalli tilivu svasaktiyinda vistaravaguttade
ನೀರಿನಲ್ಲಿ ಎಣ್ಣೆ, ವಿವೇಕಿಯಲ್ಲಿ ತಿಳಿವು ಸ್ವಶಕ್ತಿಯಿಂದ ವಿಸ್ತಾರವಾಗುತ್ತದೆ
47. Savira hasugala naduveyu karuvu tanna tayiyanne anusarisi hoguvante,
manushyana olleya mattu ketta karyagalu avanannu himbalisuttave.
ಸಾವಿರ ಹಸುಗಳ ನಡುವೆಯೂ ಕರುವು ತನ್ನ ತಾಯಿಯನ್ನೇ ಅನುಸರಿಸಿ ಹೋಗುವಂತೆ,ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನನ್ನು ಹಿಂಬಾಲಿಸುತ್ತವೆ.
48. Yava vyakti tanna tappannu saripadisikollalu tanagi horata maduttane. Atanannu solisalu yarindalu sadhyavilla.
ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿ ಹೋರಾಟ ಮಾಡುತ್ತಾನೆ. ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
Also Read: 65+ Beechi funny kannada quotes with images
49. Alpakalada sukhadalli maimareyabaradu. Takshanada sukhakkagi dirghakalada ananda bittukoduvavanu kadumurkhane sari..
ಅಲ್ಪಕಾಲದ ಸುಖದಲ್ಲಿ ಮೈಮರೆಯಬಾರದು,
ತಕ್ಷಣದ ಸುಖಕ್ಕಾಗಿ ದೀರ್ಘಕಾಲದ ಆನಂದ ಬಿಟ್ಟುಕೊಡುವವನು ಕಡುಮೂರ್ಖನೇ ಸರಿ.
50. Maryade miridavarannu yavattu namba baradu.
ಮರ್ಯಾದೆ ಮೀರಿದವರನ್ನು ಯಾವತ್ತೂ ನಂಬಬಾರದು
51. Mudharu kotte tirabekadudannu ati kastadinda koduvaru
ಮೂಢರು ಕೊಟ್ಟೇ ತೀರಬೇಕಾದುದನ್ನೂ ಅತಿ ಕಷ್ಟದಿಂದ ಕೊಡುವರು
52. Tannalli doshagaliruvavanu itarara mele sansayapaduvanu
ತನ್ನಲ್ಲಿ ದೋಷಗಳಿರುವವನು ಇತರರ ಮೇಲೆ ಸಂಶಯಪಡುವನು
53. Yavdardru kelasa shuru madid mele sucess agutto ilvo anta yochne madde kelasa madi, niyattagi dudiyorge phala ide.
ಯಾವ್ದಾರ್ದ್ರು ಕೆಲಸ ಶುರು ಮಾಡಿದ್ ಮೇಲೆ ಸಕ್ಸಸ್ ಆಗುತ್ತೋ ಇಲ್ವೋ ಅಂತ ಯೋಚ್ನೆ ಮಾಡ್ದೆ ಕೆಲಸ ಮಾಡಿ, ನಿಯತ್ತಾಗಿ ದುಡಿಯೋರ್ಗೆ ಫಲ ಇದೆ.
54. Vyakti tanna suttamuttaliruva janaru hagu parisarada mele nambike ittu jivana nadesuttiddane..
ವ್ಯಕ್ತಿ ತನ್ನ ಸುತ್ತಮುತ್ತಲಿರುವ ಜನರು ಹಾಗೂ ಪರಿಸರದ ಮೇಲೆ ನಂಬಿಕೆ ಇಟ್ಟು ಜೀವನ ನಡೆಸುತ್ತಿದ್ದಾನೆ..
55. E jagattinalli huttida prati vyakti tanna badukannu nadesuvastu shaktanagiruttane
adare bereyavarinda hana kasu padeyuvudu athava bhikshe beduvudu, jeevanada atyanta duhkhakara gantanegalalli ondu.
ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ವ್ಯಕ್ತಿ ತನ್ನ ಬದುಕನ್ನು ನಡೆಸುವಷ್ಟು ಶಕ್ತನಾಗಿರುತ್ತಾನೆ ಆದರೆ ಬೇರೆಯವರಿಂದ ಹಣ ಕಾಸು ಪಡೆಯುವುದು ಅಥವಾ ಭಿಕ್ಷೆ ಬೇಡುವುದು, ಜೀವನದ ಅತ್ಯಂತ ದುಃಖಕರ ಗಂಟನೆಗಳಲ್ಲಿ ಒಂದು ..
56. Yashasvi vyakti yavude kaleduhoda kshana,teermanagalannu nenedu kalaharana madi vyathepaduvudilla. Nivu hinde tappu madidannu jeevanadalli adhyayana endu bhavisabeku.
ಯಶಸ್ವಿ ವ್ಯಕ್ತಿ ಯಾವುದೇ ಕಳೆದುಹೋದ ಕ್ಷಣ, ತೀರ್ಮಾನಗಳನ್ನು ನೆನೆದು ಕಾಲಹರಣ ಮಾಡಿ ವ್ಯಥೆಪಡುವುದಿಲ್ಲ. ನೀವು ಹಿಂದೆ ತಪ್ಪು ಮಾಡಿದನ್ನು ಜೀವನದಲ್ಲಿ ಅಧ್ಯಯನ ಎಂದು ಭಾವಿಸಬೇಕು..
Chanakya quotes on work in Kannada
57. Hasida sinhavu hullu tinnuvudilla
ಹಸಿದ ಸಿಂಹವು ಹುಲ್ಲು ತಿನ್ನುವುದಿಲ್ಲ..
58. Kelasa chikkadagali, doddadagali arambhadindalu sruddheyindalu, sampurna shrama vahisi madabeku.
ಕೆಲಸ ಚಿಕ್ಕದಾಗಲಿ, ದೊಡ್ಡದಾಗಲೀ ಆರಂಭದಿಂದಲೂ ಶ್ರದ್ಧೆಯಿಂದಲೂ, ಸಂಪೂರ್ಣ ಶ್ರಮ ವಹಿಸಿ ಮಾಡಬೇಕು.
59. Manassinalli chintisida kelasada bagge yarondigu matanadabaradu.
Rahasya mantra galannu raksisiduvante adannu karyarupakke tarabeku.
ಮನಸ್ಸಿನಲ್ಲಿ ಚಿಂತಿಸಿದ ಕೆಲಸದ ಬಗ್ಗೆ ಯಾರೊಂದಿಗೂ ಮಾತನಾಡಬಾರದು,
ರಹಸ್ಯ ಮಂತ್ರ ಗಳನ್ನು ರಕ್ಷಿಸಿಡುವಂತೆ ಅದನ್ನು ಕಾರ್ಯರೂಪಕ್ಕೆ ತರಬೇಕು.
60. Shaktivantanige yavudu bhara?
Prayanikanige yavudu dura?
Olleya vidyavantanige yavudu videsa?
Olleya matugalannaduvavanige yaru aparicitaru?
ಶಕ್ತಿವಂತನಿಗೆ ಯಾವುದು ಭಾರ ?
ಪ್ರಯಾಣಿಕನಿಗೆ ಯಾವುದು ದೂರ?
ಒಳ್ಳೆಯ ವಿದ್ಯಾವಂತನಿಗೆ ಯಾವುದು ವಿದೇಶ ?
ಒಳ್ಳೆಯ ಮಾತುಗಳನ್ನಾಡುವವನಿಗೆ ಯಾರು ಅಪರಿಚಿತರು ?
61. Ondu kelasa hidida mele bennu hatti adannu mugisibidabeku.
ಒಂದು ಕೆಲಸ ಹಿಡಿದ ಮೇಲೆ ಬೆನ್ನು ಹತ್ತಿ ಅದನ್ನು ಮುಗಿಸಿಬಿಡಬೇಕು..
62. Kelasa maduttiddare badatana iruvudilla. Maunavagiddare jagala untaguvudilla.
ಕೆಲಸ ಮಾಡುತ್ತಿದ್ದರೆ ಬಡತನ ಇರುವುದಿಲ್ಲ, ಮೌನವಾಗಿದ್ದರೆ ಜಗಳ ಉಂಟಾಗುವುದಿಲ್ಲ.
63. Huvina sugandhavu gali bisida kade matra pasarisidare, uttama karyavu ellede pasarisuttade
ಹೂವಿನ ಸುಗಂಧವು ಗಾಳಿ ಬೀಸಿದ ಕಡೆ ಮಾತ್ರ ಪಸರಿಸಿದರೆ, ಉತ್ತಮ ಕಾರ್ಯವು ಎಲ್ಲೆಡೆ ಪಸರಿಸುತ್ತದೆ
Chanakya quotes on Friendship in Kannada
64. Prati snehada hinde ondu svartha idde iruttade svartha rahita snehave illa idondu kahisatya
ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ, ಸ್ವಾರ್ಥ ರಹಿತ ಸ್ನೇಹವೇ ಇಲ್ಲಾ, ಇದೊಂದು ಕಹಿಸತ್ಯ.
65. Snehitarannu hattira ittukolli adare nimma shatrugalannu innu hattiradinda gamanisi..
ಸ್ನೇಹಿತರನ್ನು ಹತ್ತಿರ ಇಟ್ಟುಕೊಳ್ಳಿ ಆದರೆ ನಿಮ್ಮ ಶತ್ರುಗಳನ್ನು ಇನ್ನು ಹತ್ತಿರದಿಂದ ಗಮನಿಸಿ
66. Obba manusyana sampradaya mattu nadate avana kulavannu heluttade. Avana matu yava deshadavanendu heluttade, berobbarannu kandaga torisuva utsaha, sadagara avana meliruva snehavannu torisuttade.
ಒಬ್ಬ ಮನುಷ್ಯನ ಸಂಪ್ರದಾಯ ಮತ್ತು ನಡತೆ ಅವನ ಕುಲವನ್ನು ಹೇಳುತ್ತದೆ.
ಅವನ ಮಾತು ಯಾವ ದೇಶದವನೆಂದು ಹೇಳುತ್ತದೆ, ಬೇರೊಬ್ಬರನ್ನು ಕಂಡಾಗ ತೋರಿಸುವ ಉತ್ಸಾಹ, ಸಡಗರ ಅವನ ಮೇಲಿರುವ ಸ್ನೇಹವನ್ನು ತೋರಿಸುತ್ತದೆ.
67. Svahitasakti illada sneha illave illa. Idu kahiyada satya
ಸ್ವಹಿತಾಸಕ್ತಿ ಇಲ್ಲದ ಸ್ನೇಹ ಇಲ್ಲವೇ ಇಲ್ಲ, ಇದು ಕಹಿಯಾದ ಸತ್ಯ
68. Halina jote serida niru saha halaguttade, ade riti gunavantana asraya padeda gunahinanu gunavantanaguttane.
ಹಾಲಿನ ಜೊತೆ ಸೇರಿದ ನೀರು ಸಹ ಹಾಲಾಗುತ್ತದೆ, ಅದೇ ರೀತಿ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ.
Chanakya quotes on war in Kannada
69. Tanaginta heccinavanodanagali, sarisamananodanagali yuddha madabaradu.
ತನಗಿಂತ ಹೆಚ್ಚಿನವನೊಡನಾಗಲೀ, ಸರಿಸಮನನೊಡನಾಗಲಿ ಯುದ್ಧ ಮಾಡಬಾರದು.
70. Ashaparanada karyadaksanannu mosagolisuvudu sulabha.
ಆಶಾಪರನಾದ ಕಾರ್ಯದಕ್ಷನನ್ನು ಮೋಸಗೊಳಿಸುವುದು ಸುಲಭ.
Chanakya quotes on education in Kannada
71. Saundarya mattu yauvanavannu solisuva takattu iruvudu jñanakke.
ಸೌಂದರ್ಯ ಮತ್ತು ಯೌವನವನ್ನು ಸೋಲಿಸುವ ತಾಕತ್ತು ಇರುವುದು ಜ್ಞಾನಕ್ಕೆ.
72. Pustakadalliruva vidye, bereyavara kaiyalli kottiruva hana idu eradu samayakke bekadaga upayogakke baruvudilla.
ಪುಸ್ತಕದಲ್ಲಿರುವ ವಿದ್ಯೆ, ಬೇರೆಯವರ ಕೈಯಲ್ಲಿ ಕೊಟ್ಟಿರುವ ಹಣ ಇದು ಎರಡು ಸಮಯಕ್ಕೆ ಬೇಕಾದಾಗ ಉಪಯೋಗಕ್ಕೆ ಬರುವುದಿಲ್ಲ.
Also Read: Kannada quotes about life with images
73. Kamakkinta dodda roga mattondilla.
Mohakkinta vairigalilla,
kopakke samanada beṅki illa.
Jñanakke samanada parama sukha mattondilla.
ಕಾಮಕ್ಕಿಂತ ದೊಡ್ಡ ರೋಗ ಮತ್ತೊಂದಿಲ್ಲ,
ಮೋಹಕ್ಕಿಂತ ವೈರಿಗಳಿಲ್ಲ,
ಕೋಪಕ್ಕೆ ಸಮನಾದ ಬೆಂಕಿ ಇಲ್ಲ.
ಜ್ಞಾನಕ್ಕೆ ಸಮನಾದ ಪರಮ ಸುಖ ಮತ್ತೊಂದಿಲ್ಲ ..
Kannada Chanakya quotes on Politics
74. Deshada buddhijivigalu mattu aparadhigalu talamalagondiddarendare a deshada adalita nadesuvata saridariyalliddanende artha.
ದೇಶದ ಬುದ್ಧಿಜೀವಿಗಳು ಮತ್ತು ಅಪರಾಧಿಗಳು ತಳಮಳಗೊಂಡಿದ್ದಾರೆಂದರೆ ಆ ದೇಶದ ಆಡಳಿತ ನಡೆಸುವಾತ ಸರಿದಾರಿಯಲ್ಲಿದ್ದಾನೆಂದೆ ಅರ್ಥ.
75. Tanna deshadinda ondu deshada anantaraviruva deshada rajanu mitranenisuvanu, tanna deshada pakkada rajanu satrvenisuvanu.
ತನ್ನ ದೇಶದಿಂದ ಒಂದು ದೇಶದ ಅನಂತರವಿರುವ ದೇಶದ ರಾಜನು ಮಿತ್ರನೆನಿಸುವನು, ತನ್ನ ದೇಶದ ಪಕ್ಕದ ರಾಜನು ಶತೃವೆನಿಸುವನು.
Kannada Chanakya quotes on marriage
76. Hudugi sundaravagiddaru olleya kutumbakke seradiddare purusanu akeyannu endigu maduveyagabaradu.
ಹುಡುಗಿ ಸುಂದರವಾಗಿದ್ದರೂ ಒಳ್ಳೆಯ ಕುಟುಂಬಕ್ಕೆ ಸೇರದಿದ್ದರೆ ಪುರುಷನು ಆಕೆಯನ್ನು ಎಂದಿಗೂ ಮದುವೆಯಾಗಬಾರದು..
77. Sahane illada nayakanu hendiru makkalindalu tyajisalpaduvanu
ಸಹನೆ ಇಲ್ಲದ ನಾಯಕನು ಹೆಂಡಿರು ಮಕ್ಕಳಿಂದಲೂ ತ್ಯಜಿಸಲ್ಪಡುವನು
78. Ketta hendati, mosagara mitra, vidheyanallada sevaka mattu havugaliruva maneyalli vasa, ivellavu manusyanannu jivanta samadhiyannagisuttave.
ಕೆಟ್ಟ ಹೆಂಡತಿ, ಮೋಸಗಾರ ಮಿತ್ರ, ವಿಧೇಯನಲ್ಲದ ಸೇವಕ ಮತ್ತು ಹಾವುಗಳಿರುವ ಮನೆಯಲ್ಲಿ ವಾಸ, ಇವೆಲ್ಲವೂ ಮನುಷ್ಯನನ್ನು ಜೀವಂತ ಸಮಾಧಿಯನ್ನಾಗಿಸುತ್ತವೆ.
79. Kutumbada itara mahileyara bagge purusaru endigu matanadabaradu hagu jagalavadabaradu.
ಕುಟುಂಬದ ಇತರ ಮಹಿಳೆಯರ ಬಗ್ಗೆ, ಪುರುಷರು ಎಂದಿಗೂ ಮಾತನಾಡಬಾರದು ಹಾಗೂ ಜಗಳವಾಡಬಾರದು.
80. Purusanu muru visayagalalli sada trptanagirabeku hendati, uta mattu hana.
Muru visayagalalli sada atrptanagirabeku vidye, tapassu, mattu dana.
ಪುರುಷನು ಮೂರೂ ವಿಷಯಗಳಲ್ಲಿ ಸದಾ ತೃಪ್ತನಾಗಿರಬೇಕು ಹೆಂಡತಿ, ಊಟ ಮತ್ತು ಹಣ.
ಮೂರು ವಿಷಯಗಳಲ್ಲಿ ಸದಾ ಅತೃಪ್ತನಾಗಿರಬೇಕು ವಿದ್ಯೆ, ತಪಸ್ಸು, ಮತ್ತು ದಾನ.
81. Olleya hendati pramanika mattu buddhivantalagirabeku. Ake tanna gandanannu pritisabeku mattu patiya kutumbadalli santi mattu samarasyavannu taralu prayatnisabeku.
ಒಳ್ಳೆಯ ಹೆಂಡತಿ ಪ್ರಾಮಾಣಿಕ ಮತ್ತು ಬುದ್ಧಿವಂತಳಾಗಿರಬೇಕು. ಆಕೆ ತನ್ನ ಗಂಡನನ್ನು ಪ್ರೀತಿಸಬೇಕು ಮತ್ತು ಪತಿಯ ಕುಟುಂಬದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ಪ್ರಯತ್ನಿಸಬೇಕು
82. Sundaravallada, adare kutumba maulyagalannu hondiruva hudugiyannu maduveyaguvudu olleyadu
ಸುಂದರವಲ್ಲದ, ಆದರೆ ಕುಟುಂಬ ಮೌಲ್ಯಗಳನ್ನು ಹೊಂದಿರುವ ಹುಡುಗಿಯನ್ನು ಮದುವೆಯಾಗುವುದು ಒಳ್ಳೆಯದು
83. Obba kelasagaranannu avanu rajeyalliruvaga pariksisabeku.
Sambandhikarannu mattu snehitarannu saṅkasta bandaga pariksisabeku.
Adare madadiyannu maneyalli badatana bandaga pariksisabeku…
ಒಬ್ಬ ಕೆಲಸಗಾರನನ್ನು ಅವನು ರಜೆಯಲ್ಲಿರುವಾಗ ಪರೀಕ್ಷಿಸಬೇಕು.
ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಸಂಕಷ್ಟ ಬಂದಾಗ ಪರೀಕ್ಷಿಸಬೇಕು.
ಆದರೆ ಮಡದಿಯನ್ನು ಮನೆಯಲ್ಲಿ ಬಡತನ ಬಂದಾಗ ಪರೀಕ್ಷಿಸಬೇಕು…
84. Obba vyaktiyu samajadalli samanavada, athava adakkintalu kadime sthanamana iruva kutumbada jate sambandha belesikollabeku
ಒಬ್ಬ ವ್ಯಕ್ತಿಯು ಸಮಾಜದಲ್ಲಿ ಸಮಾನವಾದ, ಅಥವಾ ಅದಕ್ಕಿಂತಲೂ ಕಡಿಮೆ ಸ್ಥಾನಮಾನ ಇರುವ ಕುಟುಂಬದ ಜತೆ ಸಂಬಂಧ ಬೆಳೆಸಿಕೊಳ್ಳಬೇಕು
85. Yavude purusanu tanna asrayadalliruva mahileya mele kettadagi vartisabaradu athava labha padeyabaradu. Ondu vele a reeti madidare samajadalli gaurava mattu sthanamanavannu kaledukollalu siddhanagirabaradu.
ಯಾವುದೇ ಪುರುಷನು ತನ್ನ ಆಶ್ರಯದಲ್ಲಿರುವ ಮಹಿಳೆಯ ಮೇಲೆ ಕೆಟ್ಟದಾಗಿ ವರ್ತಿಸಬಾರದು ಅಥವಾ ಲಾಭ ಪಡೆಯಬಾರದು.
ಒಂದು ವೇಳೆ ಆ ರೀತಿ ಮಾಡಿದರೆ ಸಮಾಜದಲ್ಲಿ ಗೌರವ ಮತ್ತು ಸ್ಥಾನಮಾನವನ್ನು ಕಳೆದುಕೊಳ್ಳಲು ಸಿದ್ಧನಾಗಿರಬಾರದು
86. Atiyada roopa sitege muluvayitu, atiyada garva ravananige keduntu maditu,
atiyada dana baliyannu nasa maditu,
adudarinda yavudu atiyagabaradu.
ಅತಿಯಾದ ರೂಪ ಸೀತೆಗೆ ಮುಳುವಾಯಿತು, ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು,
ಅತಿಯಾದ ದಾನ ಬಲಿಯನ್ನು ನಾಶ ಮಾಡಿತು,
ಆದುದರಿಂದ ಯಾವುದು ಅತಿಯಾಗಬಾರದು.
Chanakya quotes on teacher in Kannada
87. E jagattinalli huttida prati vyakti tanna badukannu nadesuvastu saktanagiruttane adare bereyavarinda hana kasu padeyuvudu athava bhikse beduvudu, jeevanada atyanta duhkhakara gantanegalalli ondu.
ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿ ವ್ಯಕ್ತಿ ತನ್ನ ಬದುಕನ್ನು ನಡೆಸುವಷ್ಟು ಶಕ್ತನಾಗಿರುತ್ತಾನೆ
ಆದರೆ ಬೇರೆಯವರಿಂದ ಹಣ ಕಾಸು ಪಡೆಯುವುದು ಅಥವಾ ಭಿಕ್ಷೆ ಬೇಡುವುದು ,
ಜೀವನದ ಅತ್ಯಂತ ದುಃಖಕರ ಗಂಟನೆಗಳಲ್ಲಿ ಒಂದು ..
88. Nimage srimantaraguva ella samarthya irabahudu.
Adare vastavadalli guru mattu margadarsaka illadiddalli srimantaragalu sadhyavilla.
ನಿಮಗೆ ಶ್ರೀಮಂತರಾಗುವ ಎಲ್ಲ ಸಾಮರ್ಥ್ಯ ಇರಬಹುದು,
ಆದರೆ ವಾಸ್ತವದಲ್ಲಿ ಗುರು ಮತ್ತು ಮಾರ್ಗದರ್ಶಕ ಇಲ್ಲದಿದ್ದಲ್ಲಿ ಶ್ರೀಮಂತರಾಗಲು ಸಾಧ್ಯವಿಲ್ಲ.
Chanakya quotes on women/girl
89. Janaru tondareyalliruva hennannu nodidaga samanyavagi bhavanatmaka hatotiyadu kolluttare adaru saha mahileya purnavivara gotillade sahaya madabaradu.
ಜನರು ತೊಂದರೆಯಲ್ಲಿರುವ ಹೆಣ್ಣನ್ನು ನೋಡಿದಾಗ ಸಾಮಾನ್ಯವಾಗಿ ಭಾವನಾತ್ಮಕ ಹತೋಟಿಯದುಕೊಳ್ಳುತ್ತಾರೆ,
ಆದರೂ ಸಹ ಮಹಿಳೆಯ ಪೂರ್ಣ ವಿವರ ಗೊತಿಲ್ಲದೆ ಸಹಾಯ ಮಾಡಬಾರದು.
90. Don’t trust fickle women
ಚಂಚಲ ಸ್ವಭಾವದ ಸ್ತ್ರೀಯರನ್ನೂ ನಂಬಬಾರದು
Chanakya quotes for parents in Kannada
91. Makkalannu aidu varsagalavarege muddisabeku,
mundina hattu varsagalavarege dandisabeku.
Hadinarara vayassige banda nantara mitrarante kanabeku
ಮಕ್ಕಳನ್ನು ಐದು ವರ್ಷಗಳವರೆಗೆ ಮುದ್ದಿಸಬೇಕು,
ಮುಂದಿನ ಹತ್ತು ವರ್ಷಗಳವರೆಗೆ ದಂಡಿಸಬೇಕು.
ಹದಿನಾರರ ವಯಸ್ಸಿಗೆ ಬಂದ ನಂತರ ಮಿತ್ರರಂತೆ ಕಾಣಬೇಕು
92. Pakshi yavattu tanna makkala bhavisya koskara gudannu kattiduvudilla…
Adu kevala tanna makkalige haraduva kaleyannu kalisuttade… Aste..
ಪಕ್ಷಿ ಯಾವತ್ತೂ ತನ್ನ ಮಕ್ಕಳ ಭವಿಷ್ಯ ಕೋಸ್ಕರ ಗೂಡನ್ನು ಕಟ್ಟಿಡುವುದಿಲ್ಲ… ಅದು ಕೇವಲ ತನ್ನ ಮಕ್ಕಳಿಗೆ ಹಾರಾಡುವ ಕಲೆಯನ್ನು ಕಲಿಸುತ್ತದೆ… ಅಷ್ಟೆ..
93. Even the highest of status will become insignificant if it is not supported by good character.
ಉತ್ತಮ ಉಚ್ಛಿಷ್ಟ ಪ್ರಕಾರವೇ ಹೀನತೆಗೆ ಹೆಸರಾಗುತ್ತದೆ.
94. A person who works only for rewards will never achieve true success.
ಅನುದಾನಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಎಂದಿಗೂ ಯಶಸ್ಸು ಸಾಧಿಸುವುದಿಲ್ಲ.
95. Time is one of the most important factors when it comes to achieving success.
ಯಶಸ್ಸು ಸಾಧಿಸಲು ಪರಿಗಣಿಸಬೇಕಾದ ಸಂಗತಿಗಳಲ್ಲಿ ಮಹತ್ವಪೂರ್ಣವಾದುದು ಸಮಯ.
96. Our enemies become dangerous only due to our own negligence.
ನಮ್ಮ ಎಚ್ಚರಿಕೆಯಿಂದ ನಮ್ಮ ಶತ್ರುಗಳೇ ನಮಗೆ ಅಪಾಯಕಾರಿ.
Conclusion
Among the many, these Chanakya quotes in Kannada, are a few of the most important. He has taught numerous essential life lessons which should be learned by everyone.
We hope you found them to be beneficial. If one implements them, they will undoubtedly be fruitful. Do save this page and share with your friends. Follow us on Facebook and Instagram for more.
Pingback: Meaningful 25+ Sudha Murthy Thoughts Collection In Kannada
Super quotes for in our life cycle very useful