150+ ಜೀವನ ಕ್ವೋಟ್ಸ ಕನ್ನಡ ದಲ್ಲಿ – Inspiring Kannada quotes about life (Jeevana) 2024

Best Kannada quotes about life with images

ಜೀವನದ ಬಗ್ಗೆ ಪ್ರೇರಣಾದಾಯಕ ಕನ್ನಡ ಉಕ್ತಿಗಳನ್ನು ತಿಳಿದುಕೊಳ್ಳಿ. ಈ ಆಳವಾದ ಮಾತುಗಳು ಜೀವನದ ತಾತ್ಪರ್ಯ, ಪ್ರೇರಣೆ ಮತ್ತು ತತ್ವದ ಬಗ್ಗೆ ನಿಮ್ಮ ನಿತ್ಯದ ಅನುಭವಗಳಿಗೆ ಅರ್ಥ ತುಂಬುವಲ್ಲಿ ಸಹಾಯ ಮಾಡುತ್ತವೆ.

ಜೀವನವು ಏರಿಳಿತಗಳಿಂದ ಕೂಡಿದ ಪ್ರಯಾಣವಾಗಿದೆ ಮತ್ತು ನಾವು ಈ ಸತ್ಯವನ್ನು ಅಳವಡಿಸಿಕೊಳ್ಳಬೇಕು. ನಾವು ಸಂತೋಷದ ಭಾಗಗಳನ್ನು ಪ್ರೀತಿಸುತ್ತಿದ್ದರೂ, ನಮ್ಮಲ್ಲಿ ಹೆಚ್ಚಿನವರು ಜೀವನದಲ್ಲಿ ತೊಂದರೆಗಳನ್ನು ಹೇಗೆ ಎದುರಿಸಬೇಕೆಂದು ಅರ್ಥಮಾಡಿಕೊಳ್ಳುವುದಿಲ್ಲ.

ಕೆಳಗಿನ ನಮ್ಮ ಸಂಗ್ರಹಣೆಯಲ್ಲಿ ನಾವು ಕನ್ನಡದ ಪ್ರಸಿದ್ಧ ಲೇಖಕರ ಅಭಿಪ್ರಾಯಗಳನ್ನು ಬೆಳೆಸಲು ಪ್ರಯತ್ನಿಸಿದ್ದೇವೆ, ಅದು ನಿಮಗೆ ಕಷ್ಟದ ಸಮಯದಲ್ಲಿ ನೌಕಾಯಾನ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ಜೀವನ ಪಾಠಗಳಿಂದ ತುಂಬಿರುವ ನಮ್ಮ ಸ್ಪೂರ್ತಿದಾಯಕ ಕನ್ನಡ ಉಲ್ಲೇಖಗಳು ದೃಢವಾಗಿರಲು ಮತ್ತು ಪ್ರತಿ ಸನ್ನಿವೇಶಕ್ಕೂ ಸಕಾರಾತ್ಮಕ ಮನೋಭಾವದೊಂದಿಗೆ ಜೀವನವನ್ನು ನಡೆಸಲು ನಿಮಗೆ ನೆನಪಿಸುತ್ತದೆ. ಈ ಸಕಾರಾತ್ಮಕ ಉಲ್ಲೇಖಗಳು ನಿಮ್ಮ ಮಾನಸಿಕ ಇಕ್ಕಟ್ಟುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ನಿಮ್ಮ ಜೀವನದಲ್ಲಿ ನೀವು ಬಯಸುವ ಎಲ್ಲಾ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. Kannadaquote.in ನಲ್ಲಿ ಜೀವನದ ಬಗ್ಗೆ 50+ ಕನ್ನಡ ಉಲ್ಲೇಖಗಳನ್ನು ಎಕ್ಸ್‌ಪ್ಲೋರ್ ಮಾಡೋಣ.

Also Read : 60+ Kannada attitude quotes for FB & whatsapp status

Kannada quotes on life with images download 

quotes in Kannada language about life
Quotes in Kannada language about life with images

Good Kannada quotes words about life 

1. Sihi hannu koduva marave janarinda hecchu kalletu tinnuvudu,
hageye upakara maduttiruva janarige hecchu hecchu kasta nindane, apavadagalu baruvavu.

ಸಿಹಿ ಹಣ್ಣು ಕೊಡುವ ಮರವೇ ಜನರಿಂದ ಹೆಚ್ಚು ಕಲ್ಲೇಟು ತಿನ್ನುವುದು, ಹಾಗೆಯೇ ಉಪಕಾರ ಮಾಡುತ್ತಿರುವ ಜನರಿಗೆ ಹೆಚ್ಚು ಹೆಚ್ಚು ಕಷ್ಟ,ನಿಂದನೆ, ಅಪವಾದಗಳು ಬರುವವು.

2. Malegu munna kelavomme matra agasadalli kamanabillu mudibaruttade
hageye santosavu jeevanadalli agaga bandu,kastagalu sasvatavallavendu nenapisuttade…

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ…

3. Smashanadalli bidda budiyannu nodi manassu mellane nudiyitu.
Bari budiyagalu manusya jeevana purti bereyavarannu nodi uriyuttane endu. .

ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು.. 

4. Pratiyondu kattale manegu belakina darigagi ondu kitaki iruttade,
ade reeti namma kastada jeevanadalli sukhada darigagi ondu dari idde iruttade..Kayuva talme irabekaste..

ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ, ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ, ಕಾಯುವ ತಾಳ್ಮೆ ಇರಬೇಕಷ್ಟೇ….

5. Jeevanadalli yarigu nimmanna mecchisuvudakke prayatna madabedi,
olletanadinda badukoke prayatnapadi nimma olleyatana yarigadaru istavagutte

ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ,
ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ, ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..

Meaningful Kannada quotes about life with image
Meaningful Kannada quotes about life with image

Kannadaquotes image download button6. Ondu dina kanasu jeevavannu kelutte, nanu yavaga nanasu agodu anta…
Aga jeevana nagutta helutte ella kanasugalu nanasadare jeevanakke arthane irolla anta

ಒಂದು ದಿನ ಕನಸು ಜೀವವನ್ನು ಕೇಳುತ್ತೆ, ನಾನು ಯಾವಾಗ ನನಸು ಆಗೋದು ಅಂತ …
ಆಗ ಜೀವನ ನಗುತ್ತಾ ಹೇಳುತ್ತೆ ಎಲ್ಲಾ ಕನಸುಗಳು ನನಸಾದರೆ ಜೀವನಕ್ಕೆ ಅರ್ಥಾನೇ ಇರೋಲ್ಲ ಅಂತ..

7. Bhumi emba eradu aksaradalli hutti,
jeeva emba eradu aksara padedu,
vidye emba eradu aksara kalitu,
savu emba aksara baruva tanaka,
sneha emba eradu aksarava mareyabedi

ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವ ಎಂಬ ಎರಡು ಅಕ್ಷರ ಪಡೆದು, ವಿದ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರವ ಮರೆಯಬೇಡಿ..

8. Paristhiti badalaguttade, snehitaru doravaguttare,
aadare baduku matra yarigagiyu nilluvudilla..

ಪರಿಸ್ಥಿತಿ ಬದಲಾಗುತ್ತದೆ, ಸ್ನೇಹಿತರು ದೂರವಾಗುತ್ತಾರೆ,
ಆದರೆ ಬದುಕು ಮಾತ್ರ ಯಾರಿಗಾಗಿಯೂ ನಿಲ್ಲುವುದಿಲ್ಲ…

9. Gidadalli este mullugalu iddaru adaralli hu aralabeku,
hageye manassinalli este noviddaru mukhadalli nagu tumbirabeku.

ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು, ಹಾಗೆಯೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು…

Also Read : Kannada Ogatugalu with Answers in Kannada

10. Nambike annu chikka aasare sikkare saku,
jeevanadalli enannadaru sadhisabahudu..

ನಂಬಿಕೆ ಅನ್ನೂ ಚಿಕ್ಕ ಆಸರೆ ಸಿಕ್ಕರೆ ಸಾಕು,
ಜೀವನದಲ್ಲಿ ಏನನ್ನಾದರು ಸಾಧಿಸಬಹುದು..

Quotes in Kannada language about life with images

11. Ettaradalli nintaksana samudrada antya kanadu, hage tappu madade jeevana sagadu

ಎತ್ತರದಲ್ಲಿ ನಿಂತಾಕ್ಷಣ ಸಮುದ್ರದ ಅಂತ್ಯ ಕಾಣದು, ಹಾಗೆ ತಪ್ಪು ಮಾಡದೆ ಜೀವನ ಸಾಗದು..

Baduku kannada quote with images
Baduku Kannada quote with images download

Kannadaquotes image download button12. Solina patha chanda,
hasivina uta canda,
pritiya kopa canda. . . . .
Jeevanadalli ella swikarisuva manassiddare
namma baduke ananda.

ಸೋಲಿನ ಪಾಠ ಚಂದ,
ಹಸಿವಿನ ಊಟ ಚಂದ,
ಪ್ರೀತಿಯ ಕೋಪ ಚಂದ . . . . .
ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ
ನಮ್ಮ ಬದುಕೇ ಆನಂದ . . . . .

13. Badukinalli ella kastagaligu eradu aushadhagalive, ondu dudime,
innondu talme.

ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ, ಒಂದು ದುಡಿಮೆ,
ಇನ್ನೊಂದು ತಾಳ್ಮೆ.

14. Life lli nav hako batte branded adre saladu, nav mado yochane mattu yojane kuda branded agidre jeeva kuda branded agirutte..

ಲೈಫ್ ಲ್ಲಿ ನಾವ್ ಹಾಕೋ ಬಟ್ಟೆ ಬ್ರಾಂಡೆಡ್ ಆದ್ರೆ ಸಾಲದು, ನಾವ್ ಮಾಡೋ ಯೋಚನೆ ಮತ್ತು ಯೋಜನೆ ಕೂಡ ಬ್ರಾಂಡೆಡ್ ಆಗಿದ್ರೆ ಜೀವ ಕೂಡ ಬ್ರಾಂಡೆಡ್ ಆಗಿರುತ್ತೆ..

Meaningful Kannada quotes on Life with images

15. Nadigalu mundakke saguva horatu hinde sariyuvudilla,
ade riti namma jeevanavannu kuda
kaledu hoda badukina bagge chintisade munde sagabeku..

ನದಿಗಳು ಮುಂದಕ್ಕೆ ಸಾಗುವ ಹೊರತು ಹಿಂದೆ ಸರಿಯುವುದಿಲ್ಲ,
ಅದೇ ರೀತಿ ನಮ್ಮ ಜೀವನವನ್ನು ಕೂಡ
ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ ಮುಂದೆ ಸಾಗಬೇಕು..

16. Jeevanakkondu artha sigabekendare ista bandante badukabeku kasta bandaru edurisabeku

ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ, ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರು ಎದುರಿಸಬೇಕು…

Kannada quotes on life
Kannada quotes about life image download

Kannadaquotes image download button17. Nivu ettarakke eridaga jana nimmatta kallu turuttare hagendu nivu kelakke nodutta nillabedi, badalige innu ettarakkeri, aga a kallugalu nimage taguvude illa…

ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ, ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ..

Real meaning of Kannada life quotes for sharechat

18. Yavattu jeevanadalli yava vastu kuda sulabhavagi sigabaradu, yakandre estu sulabhavagi namage sigutto adara bele namage gottagalla

ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು, ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ…

19. Maralina mele maralu anta baribahudu.
Adare nirina mele niru anta bariyokkaguta
jeevanada asegalu hage kelavu sadhya Kelavu asadhya

ಮರಳಿನ ಮೇಲೆ ಮರಳು ಅಂತ ಬರೀಬಹುದು,
ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತಾ!
ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ, ಕೆಲವು ಅಸಾಧ್ಯ.

Thoughts about jeevana life quotes in Kannada
Thoughts about Jeevana life quotes in Kannada

Kannadaquotes image download button20. Prapanchadalli ninnavaru yaru anta kelidare,
samaya endare tappenilla,
yakandare onduvele adu sari ittu andre ellaru nammavaru. .
Ade samaya sari illa andare yaru nammavaralla. . . !

ಪ್ರಪಂಚದಲ್ಲಿ ನಿನ್ನವರು ಯಾರು ಅಂತ ಕೇಳಿದರೆ,
ಸಮಯ ಎಂದರೆ ತಪ್ಪೇನಿಲ್ಲ,
ಯಾಕಂದ್ರೆ ಒಂದು ವೇಳೆ ಅದು ಸರಿ ಇತ್ತು ಅಂದ್ರೆ ಎಲ್ಲರೂ ನಮ್ಮವರು . .
ಅದೇ ಸಮಯ ಸರಿ ಇಲ್ಲ ಅಂದರೆ ಯಾರೂ ನಮ್ಮವರಲ್ಲ . . . !

21. Chala irabeku horatu – hatha erabaradu,
bala irabeku horatu ahaṁ irabaradu,
bereyavara buddhivadakke kivigoduva
sadbuddhi iddare,
navu namma jeevanadallina esto
anahutagalannu tappisabahudu

ಛಲ ಇರಬೇಕು ಹೊರತು – ಹಠ ಇರಬಾರದು,
ಬಲ ಇರಬೇಕು ಹೊರತು -ಅಹಂ ಇರಬಾರದು,
ಬೇರೆಯವರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದರೆ,
ನಾವು ನಮ್ಮ ಜೀವನದಲ್ಲಿನ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು…

Also Read : 50+ Love quotes for him in Kannada download

22. Athiyagi yochane mavudannu bittu bidi, jeevanadalli enaguttadeyo agali bidi..

ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..

23. Guri talupalu gundige ondiddare saladu, uttama nirdhara kaigolluva gunavirabeku – Sanju

ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..

24. Jeeva chikkadu jeevana doddadu, sayuvavanige onde dari sadhisuvavanige savira dari

ಜೀವ ಚಿಕ್ಕದು ಜೀವನ ದೊಡ್ಡದು, ಸಾಯುವವನಿಗೆ ಒಂದೇ ದಾರಿ, ಸಾಧಿಸುವವನಿಗೆ ಸಾವಿರ ದಾರಿ..

Inspirational Quotes About Success in Kannada
Inspirational quotes about Success in Kannada

Kannadaquotes image download button

Nambike quotes in Kannada words

25. Navu yara mele jasti nambike ittu,
avara munde namma manadalada matu helikollutteveyo,
avare namage sulabhavagi mosa maduttare

ನಾವು ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು,
ಅವರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ,
ಅವರೆ ನಮಗೆ ಸುಲಭವಾಗಿ ಮೋಸ ಮಾಡುತ್ತಾರೆ.

26. Mukhakke masibaliyurna bekadre nambu, aadre nambike anno banna balkondu nataka madorna nambeda…

ಮುಖಕ್ಕೆ ಮಸಿಬಳಿಯೂರ್ನ ಬೇಕಾದ್ರೆ ನಂಬು, ಆದ್ರೆ ನಂಬಿಕೆ ಅನ್ನೋ ಬಣ್ಣ ಬಳ್ಕೊಂಡು ನಾಟಕ ಮಾಡೋರ್ನ ನಂಬೇಡ…

27. Huttu nammadalla,
savu nammadalla,
bhumi nammadalla,
E prakr̥ti nammadalla,
adare nammadu anta namma jote
iruvudu, uliyodu kevala nambike – sneha matra..

ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ ನಮ್ಮದಲ್ಲ,ಈ ಪ್ರಕೃತಿ ನಮ್ಮದಲ್ಲ,
ಆದರೆ ನಮ್ಮದು ಅಂತ ನಮ್ಮ ಜೊತೆ ಇರುವುದು, ಉಳಿಯೋದು ಕೇವಲ ನಂಬಿಕೆ -ಸ್ನೇಹ ಮಾತ್ರ..

28. Nambike annuvudu parisuddha halu,
adannu sullemba huli halumaduttade…

ನಂಬಿಕೆ ಅನ್ನುವುದು ಪರಿಶುದ್ಧ ಹಾಲು,
ಅದನ್ನು ಸುಳ್ಳೆಂಬ ಹುಳಿ ಹಾಳುಮಾಡುತ್ತದೆ…

29. Ondu sari manassina pritiya nambikege pettubiddare,
mattondu a manassu yarannu pritisuvudilla.

ಒಂದು ಸಾರಿ ಮನಸ್ಸಿನ ಪ್ರೀತಿಯ ನಂಬಿಕೆಗೆ ಪೆಟ್ಟುಬಿದ್ದರೆ,
ಮತ್ತೊಂದು ಆ ಮನಸ್ಸು ಯಾರನ್ನೂ ಪ್ರೀತಿಸುವುದಿಲ್ಲ.

30. Nambikege suryanu ondolle udaharane,
sanje mulugidaru,
nale matte bande baruttane ennuvante.

ನಂಬಿಕೆಗೆ ಸೂರ್ಯನು ಒಂದೊಳ್ಳೆ ಉದಾಹರಣೆ,
ಸಂಜೆ ಮುಳುಗಿದರೂ,
ನಾಳೆ ಮತ್ತೆ ಬಂದೇ ಬರುತ್ತಾನೆ ಎನ್ನುವಂತೆ.

31. Nambikeyu olleya sambandhada mula,
nambike ondiradiddare jeevanave halu.

ನಂಬಿಕೆಯು ಒಳ್ಳೆಯ ಸಂಬಂಧದ ಮೂಲ,
ನಂಬಿಕೆ ಒಂದಿರದಿದ್ದರೆ ಜೀವನವೇ ಹಾಳು.

32. Manadalliruva nambikege manasthapa bandare,
a manasse mududi hoguttade.

ಮನದಲ್ಲಿರುವ ನಂಬಿಕೆಗೆ ಮನಸ್ಥಾಪ ಬಂದರೆ,
ಆ ಮನಸ್ಸೆ ಮುದುಡಿ ಹೋಗುತ್ತದೆ.

33. Nambike ellara melu iruttade,
adannu ulisikolluvudu avaravara yogyateyagiruttade.

ನಂಬಿಕೆ ಎಲ್ಲರ ಮೇಲೂ ಇರುತ್ತದೆ,
ಅದನ್ನು ಉಳಿಸಿಕೊಳ್ಳುವುದು ಅವರವರ ಯೋಗ್ಯತೆಯಾಗಿರುತ್ತದೆ.

34. Berobbara nambikeyannu ulisikolluvudu
namma yogyateyannu pradarsisuttade.

ಬೇರೊಬ್ಬರ ನಂಬಿಕೆಯನ್ನು ಉಳಿಸಿಕೊಳ್ಳುವುದು
ನಮ್ಮ ಯೋಗ್ಯತೆಯನ್ನು ಪ್ರದರ್ಶಿಸುತ್ತದೆ.

35. Nambike emba gaju odedu matte kudidaru
adara birukugalu yavagalu shashvata…

ನಂಬಿಕೆ ಎಂಬ ಗಾಜು ಒಡೆದು ಮತ್ತೆ ಕೂಡಿದರೂ
ಅದರ ಬಿರುಕುಗಳು ಯಾವಾಗಲೂ ಶಾಶ್ವತ…

Meaningful nambike quotes in kannada
Meaningful nambike quotes in kannada

Kannadaquotes image download button36. Yaru yaru melu nambike irisuvudu namma tappagiruttade.

ಯಾರು ಯಾರು ಮೇಲೂ ನಂಬಿಕೆ ಇರಿಸುವುದು ನಮ್ಮ ತಪ್ಪಾಗಿರುತ್ತದೆ. 

37. Obba vyaktiyu namma mele nambike ittukondiddane
endare adu nammatanavannu namage torisuttade.

ಒಬ್ಬ ವ್ಯಕ್ತಿಯು ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾನೆ
ಎಂದರೆ ಅದು ನಮ್ಮತನವನ್ನು ನಮಗೆ ತೋರಿಸುತ್ತದೆ.

Whatsapp status nambike droha quotes in kannada

38. Nambike emba mukhavada dharisi
nantastike maduva janariruvavaru illi

ನಂಬಿಕೆ ಎಂಬ ಮುಖವಾಡ ಧರಿಸಿ
ನಂಟಸ್ತಿಕೆ ಮಾಡುವ ಜನರಿರುವವರು ಇಲ್ಲಿ.

39. Nambikeya mukhavadadinda nammannu narabaliyannagisuva janariruvaru.

ನಂಬಿಕೆಯ ಮುಖವಾಡದಿಂದ ನಮ್ಮನ್ನು ನರಬಲಿಯನ್ನಾಗಿಸುವ ಜನರಿರುವರು.

40. Nambikeyu nambida vyaktiyannu, naleya kanasugalige kondyoyuttade.

ನಂಬಿಕೆಯು ನಂಬಿದ ವ್ಯಕ್ತಿಯನ್ನು, ನಾಳೆಯ ಕನಸುಗಳಿಗೆ ಕೊಂಡ್ಯೊಯುತ್ತದೆ.

41. Nambikedrohavu nambida vyaktiya olle manassannu kole maduttade.

ನಂಬಿಕೆದ್ರೋಹವು ನಂಬಿದ ವ್ಯಕ್ತಿಯ ಒಳ್ಳೇ ಮನಸ್ಸನ್ನು ಕೊಲೆ ಮಾಡುತ್ತದೆ.

42. Tanna kelasavagabekadare mosagaranu kuda nambikeya mukhavada dharisiye munduvariyuttane.

ತನ್ನ ಕೆಲಸವಾಗಬೇಕಾದರೆ ಮೋಸಗಾರನೂ ಕೂಡ ನಂಬಿಕೆಯ ಮುಖವಾಡ ಧರಿಸಿಯೇ ಮುಂದುವರಿಯುತ್ತಾನೆ.

Also Read : Kannada Ogatugalu with Answers in Kannada

43. Lokadalli nambisi narabali maduvavare hecchiddare, addakkagiye yarannu ati hecchu nambabaradu.

ಲೋಕದಲ್ಲಿ ನಂಬಿಸಿ ನರಬಲಿ ಮಾಡುವವರೇ ಹೆಚ್ಚಿದ್ದಾರೆ, ಅದ್ದಕ್ಕಾಗಿಯೇ ಯಾರನ್ನು ಅತೀ ಹೆಚ್ಚು ನಂಬಬಾರದು.

44. Nambikege mosa madidagale nambisida vyaktiyu manassinalli hatyeyagiruttane.

ನಂಬಿಕೆಗೆ ಮೋಸ ಮಾಡಿದಾಗಲೇ ನಂಬಿಸಿದ ವ್ಯಕ್ತಿಯು ಮನಸ್ಸಿನಲ್ಲಿ ಹತ್ಯೆಯಾಗಿರುತ್ತಾನೆ.

45. Nambikeyindale bennige churihakuva janariruvaru husharu..!

ನಂಬಿಕೆಯಿಂದಲೇ ಬೆನ್ನಿಗೆ ಚೂರಿಹಾಕುವ ಜನರಿರುವರು ಹುಷಾರು..!

46. Mosa hodavarellaru andhatanadinda nambiye mosahodavaru.

ಮೋಸ ಹೋದವರೆಲ್ಲರೂ ಅಂಧತನದಿಂದ ನಂಬಿಯೇ ಮೋಸಹೋದವರು.

47. I jagattinalli nambike ulisikolluvudannu modalu kaliyabeku.

ಈ ಜಗತ್ತಿನಲ್ಲಿ ನಂಬಿಕೆ ಉಳಿಸಿಕೊಳ್ಳುವುದನ್ನು ಮೊದಲು ಕಲಿಯಬೇಕು.

48. Jeevanada antyadavaregu kaliyuvudu bettadastide, ennuvude
baduku kalisuva patha..

ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ, ಎನ್ನುವುದೇ
ಬದುಕು ಕಲಿಸುವ ಪಾಠ ..

49. Novu kalisuva pathavannu nagu endigu kalisalaradu
subharatri

ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು 

50. Artha madikolluva manassu
kai jodisuva sneha
namma jeevanada nijavada astigalu

ಅರ್ಥ ಮಾಡಿಕೊಳ್ಳುವ ಮನಸ್ಸು,
ಕೈ ಜೋಡಿಸುವ ಸ್ನೇಹ,
ನಮ್ಮ ಜೀವನದ ನಿಜವಾದ ಆಸ್ತಿಗಳು..

Relationship jeevana life quotes in Kannada
Relationship jeevana life quotes in Kannada

Kannadaquotes image download button51. Nimma rahasyavannu yarigu helabedi, ave nimage muluvaguttave..

ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ..

Also Read : 45+ Kannada inspirational quotes with images

Conclusion

In the above we provided the best collection of life quotes in Kannada and Kannada quotes about life.

We sincerely wish that these quotes help you in leading a life with a strong mindset. These quotes will highly benefit our readers and we recommend you to share it with your friends and family too. Read these quotes to children so that they learn valuable life lessons early on too. Our collection focuses on how we can help the reader to get the positive boost they need in their lives.

Share these quotes as stories, status or messages in WhatsApp, Facebook, Instagram etc so that maximum people derive the benefits from them! Check our other best quotes in Kannada and support us in our endeavours of promoting these Kannada quotes.

Daily motivational and inspirational quotes follow our Instagram page Kannadaquote.in

This Post Has 5 Comments

  1. Sharanappa Mundaragi

    These thoughts make our life better

    1. Kannadiga

      ಧನ್ಯವಾದಗಳು …✌..ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕ್ವೋಟ್ಸಗಳನ್ನೂ ಸೇರಿಸುತ್ತೇವೆ …

Leave a Reply