Tricky 95+ Kannada Ogatugalu with Answers in Kannada 2024

”ಒಗಟು”: ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಲ್‌). ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರುಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ.

ಒಗಟಿನಲ್ಲಿ ಎರಡು ಸದೃಶವಸ್ತುಗಳಿರಬೇಕು ಒಂದು ಉಪಮಾನ, ಮತ್ತೊಂದು ಉಪಮೇಯ. ಇಲ್ಲಿ ಉಪಮಾನ ವಾಚ್ಯವಾಗಿರುತ್ತದೆ; ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ. ಅದನ್ನು ಒಗಟೆಯ ಕರ್ತೃ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿರುತ್ತಾನೆ. ಉಪಮಾನದ ಆಧಾರದಿಂದ ಉಪಮೇಯವನ್ನು ಪತ್ತೆಮಾಡಬೇಕಾಗುತ್ತದೆ. ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.

In the below we have listed the famous Kannada ogatugalu with answers, these are collected from various books and social media platforms. In Karnataka, most of the ogatugalu(riddles) were originated from the village people and hence popularly known as Janapada Ogatugalu.

Simple Riddles with answers in Kannada

Kannada ogatugalu riddles in kannada with answers image
Kannada ogatugalu riddles in kannada with answers image

1. ನೋಡಿದರೆ ಕಲ್ಲು, ನೀರು ಹಾಕಿದರೆ ಮಣ್ಣು. ನಾನ್ಯಾರು?
[su_spoiler title=”Answer” style=”fancy” icon=”plus-circle”]ಸುಣ್ಣ[/su_spoiler]

2. ಕಾಲಿಲ್ಲದೇ ನಡೆಯುವುದು, ತಲೆ ಇಲ್ಲದೇ ನುಡಿಯುವುದು, ಮೇಲು ಕೆಳಗಾಗಿ ಓಡುವುದು. ಇದೇನು?
[su_spoiler title=”Answer” style=”fancy” icon=”plus-circle”]ನದಿ[/su_spoiler]

3. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು. ಇದೇನು?
[su_spoiler title=”Answer” style=”fancy” icon=”plus-circle”]ತಾರೆಗಳು[/su_spoiler]

4. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ. ಇದು ಏನು?
[su_spoiler title=”Answer” style=”fancy” icon=”plus-circle”]ಮೊಟ್ಟೆ[/su_spoiler]

5. ಅಂಗಳದಲ್ಲಿ ಹುಟ್ಟುವುದುಅಂಗಳದಲ್ಲಿ ಬೆಳೆಯುವುದುತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?
[su_spoiler title=”Answer” style=”fancy” icon=”plus-circle”]ಕೋಳಿ[/su_spoiler]

Also Read : ಒಗಟುಗಳ ಇತಿಹಾಸ

Kannada ogatugalu with answer images
Kannada ogatugalu with answer images
Kannadaquotes image download button

6. ಹತ್ತಾರು ಮಕ್ಕಳ ತಂದೆ, ಅದಕ್ಕೆ ತಲೆಯ ಮೇಲೆ ಜುಟ್ಟು. ನಾನ್ಯಾರು?

[su_spoiler title=”Answer” style=”fancy” icon=”plus-circle”]ಹುಂಜ[/su_spoiler]

7. ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಕಪ್ಪೆ[/su_spoiler]

8. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು ನಾನ್ಯಾರು?
[su_spoiler title=”Answer” style=”fancy” icon=”plus-circle”]ಸೀತಾಫಲ[/su_spoiler]

Also Read : 60+ Life Motivational quotes in Kannada

9. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತೆ ನಾನ್ಯಾರು?
[su_spoiler title=”Answer” style=”fancy” icon=”plus-circle”]ಆಕಾಶ[/su_spoiler]

10. ಆರು ಕಾಲು ಅಂಕಣ್ಣ, ಮೂರು ಕಾಲು ದೊಂಕಣ್ಣ, ಸದಾ ಮೀಸೆ ತಿರುವಣ್ಣ, ಇದು ಏನು?
[su_spoiler title=”Answer” style=”fancy” icon=”plus-circle”]ನೊಣ[/su_spoiler]

Kannada Ogatugalu(Riddles) in Kannada with answers

ಒಗಟು ಬಿಡಿಸಿ kannada ogatugalu with answer images
ಒಗಟು ಬಿಡಿಸಿ kannada ogatugalu with answer images
Kannadaquotes image download button

11. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ ನಾನ್ಯಾರು?
[su_spoiler title=”Answer” style=”fancy” icon=”plus-circle”]ಬಾಳೆಹಣ್ಣು[/su_spoiler]

12. ಕಲ್ಲು ತುಳಿಯುತ್ತೆ, ಮುಳ್ಳು ಮೇಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ ನಾನ್ಯಾರು?
[su_spoiler title=”Answer” style=”fancy” icon=”plus-circle”]ಚಪ್ಪಲಿ[/su_spoiler]

13. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ, ತುಟಿ ಕೆಂಪಗಾಗಿದೆ. ಮಳೆಯಿಲ್ಲ, ಬೆಲೆಯಿಲ್ಲ, ಮೈ ಹಸಿರಾಗಿದೆ.
[su_spoiler title=”Answer” style=”fancy” icon=”plus-circle”]ಗಿಳಿ[/su_spoiler]

Also Read : 45+ Inspiring Money quotes in Kannada with images

14. ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು, ಇದು ಏನು?
[su_spoiler title=”Answer” style=”fancy” icon=”plus-circle”]ಛತ್ರಿ[/su_spoiler]

15. ಕಾಡಿನಲ್ಲಿ ಹುಟ್ಟುವುದು, ಕಾಡಿನಲ್ಲಿ ಬೆಳೆಯುವುದು, ಕಡಿದಲ್ಲಿ ಕಂಪ ಸೂಸುವೆನು ನಾನ್ಯಾರು?
[su_spoiler title=”Answer” style=”fancy” icon=”plus-circle”]ಶ್ರೀಗಂಧ[/su_spoiler]

Vagatu ogatu kannada ogatugalu with answer images
Vagatu ogatu kannada ogatugalu with answer images
Kannadaquotes image download button

16. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ, ಇದು ಏನು?
[su_spoiler title=”Answer” style=”fancy” icon=”plus-circle”]ಹುಣಸೇಹಣ್ಣು[/su_spoiler]

17. ಒಂದು ಕಾಲಿನ ಪಕ್ಷಿಗೆ ಒಂಬತ್ತು ರೆಕ್ಕೆ, ಒಂದೇ ಕಾಲಲ್ಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ. ಇದು ಏನು?
[su_spoiler title=”Answer” style=”fancy” icon=”plus-circle”]ಜೋಳದ ದಂಟು[/su_spoiler]

18. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ ನಾನ್ಯಾರು?
[su_spoiler title=”Answer” style=”fancy” icon=”plus-circle”]ಕುಂಕುಮ[/su_spoiler]

19. ಮನೆ ಮೇಲೆ ಮಲ್ಲಿಗೆ ಹೂವು ನಾನ್ಯಾರು?
[su_spoiler title=”Answer” style=”fancy” icon=”plus-circle”]ಮಂಜು(Ice)[/su_spoiler]

20. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು. ಇದು ಏನು?
[su_spoiler title=”Answer” style=”fancy” icon=”plus-circle”]ಈರುಳ್ಳಿ[/su_spoiler]

Kannada language kannada ogatugalu with answer images
Kannada language kannada ogatugalu with answer images
Kannadaquotes image download button

21. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಮಲ್ಲಿಗೆ[/su_spoiler]

22. ಬಾ ಅಂದರೆ ಬರೋಲ್ಲ, ಹೋಗು ಅಂದರೆ ಹೋಗೋಲ್ಲ ನಾನ್ಯಾರು?
[su_spoiler title=”Answer” style=”fancy” icon=”plus-circle”]ಮಳೆ[/su_spoiler]

23. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ ನಾನ್ಯಾರು?
[su_spoiler title=”Answer” style=”fancy” icon=”plus-circle”]ಇಲಿ[/su_spoiler]

24. ತಮ್ಮಂಗೆ ಮೂರು ಕಣ್ಣು, ಅಮ್ಮಂಗೆ ಒಂದೇ ಕಣ್ಣು ನಾನ್ಯಾರು?
[su_spoiler title=”Answer” style=”fancy” icon=”plus-circle”]ತೆಂಗಿನ ಕಾಯಿ[/su_spoiler]

25. ಹಸಿರು ಮೈ, ಹಳದಿ ಮೈ, ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ…
[su_spoiler title=”Answer” style=”fancy” icon=”plus-circle”]ಮಾವು[/su_spoiler]

Janapada ogatugalu kannada ogatugalu with answer images
Janapada ogatugalu kannada ogatugalu with answer images
Kannadaquotes image download button

26. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ ನಾನ್ಯಾರು?
[su_spoiler title=”Answer” style=”fancy” icon=”plus-circle”]ಕಣ್ಣು[/su_spoiler]

27. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ..
[su_spoiler title=”Answer” style=”fancy” icon=”plus-circle”]ದೀಪ[/su_spoiler]

28. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು ನಾನ್ಯಾರು?
[su_spoiler title=”Answer” style=”fancy” icon=”plus-circle”]ಸುಣ್ಣ[/su_spoiler]

29. ಹಾರಿದರೆ ಹನುಮಂತ ಕೂಗಿದರೆ ಶಂಖ ನಾನ್ಯಾರು?
[su_spoiler title=”Answer” style=”fancy” icon=”plus-circle”]ಕಪ್ಪೆ[/su_spoiler]

30. ಹುಲಿಯ ಚಿಕ್ಕಮ್ಮ, ಇಲಿಯ ಮುಕ್ಕಮ್ಮ ನಾನ್ಯಾರು?
[su_spoiler title=”Answer” style=”fancy” icon=”plus-circle”]ಬೆಕ್ಕು[/su_spoiler]

Ogatu kannada ogatugalu with answer images
Ogatu kannada ogatugalu with answer images
Kannadaquotes image download button

31. ಬರೋದ ಕಂಡು ಕೈ ಒಡ್ತಾರೆ ನಾನ್ಯಾರು?
[su_spoiler title=”Answer” style=”fancy” icon=”plus-circle”]ಬಸ್[/su_spoiler]

32. ಒಂಟಿಕಾಲಿನ ಕುಂಟ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಬುಗುರಿ[/su_spoiler]

33. ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ ನಾನ್ಯಾರು?
[su_spoiler title=”Answer” style=”fancy” icon=”plus-circle”]ಪೋಸ್ಟ್ ಕಾರ್ಡ್[/su_spoiler]

34. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ ಕೋಟೆ, ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು ನಾನ್ಯಾರು?
[su_spoiler title=”Answer” style=”fancy” icon=”plus-circle”]ಪರಂಗಿ ಹಣ್ಣು[/su_spoiler]

35. ನೀಲಿ ಕೆರೆಯಲಿ ಬಿಳಿ ಮೀನು ನಾನ್ಯಾರು?
[su_spoiler title=”Answer” style=”fancy” icon=”plus-circle”]ನಕ್ಷತ್ರ[/su_spoiler]

Kannada ogatugalu riddles in kannada with answers image
Kannada ogatugalu riddles in kannada with answers image
Kannadaquotes image download button

36. ಅಂಕುಡೊಂಕಿನ ಬಾವಿ, ಹೊಕ್ಕು ನೋಡಿದ್ರೆ ಸ್ವಲ್ಪವೂ ನೀರಿಲ್ಲ ನಾನ್ಯಾರು?
[su_spoiler title=”Answer” style=”fancy” icon=”plus-circle”]ಕಿವಿ[/su_spoiler]

37. ಅಮ್ಮನ ಆಕಾಶವಾಣಿ ನಾನು?
[su_spoiler title=”Answer” style=”fancy” icon=”plus-circle”]ಮಗು[/su_spoiler]

38. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ ಇದು ಏನು?
[su_spoiler title=”Answer” style=”fancy” icon=”plus-circle”]ಹಲಸಿನ ಹಣ್ಣು, ಬೀಜ[/su_spoiler]

39. ಒಂದು ತೇಲುತ್ತೆ, ಒಂದು ಮುಳುಗುತ್ತೆ, ಒಂದು ಕರಗುತ್ತೆ. ನಾನ್ಯಾರು?
[su_spoiler title=”Answer” style=”fancy” icon=”plus-circle”]ವಾರ, ತಿಂಗಳು, ವರ್ಷ[/su_spoiler]

40. ಒಂದು ಮನೆಯಲ್ಲಿ ಮೂರು ಜನ ಅಕ್ಕ – ತಂಗಿಯರಿದ್ದಾರೆ, ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಆಗೋಲ್ಲ, ಇದು ಏನು?
[su_spoiler title=”Answer” style=”fancy” icon=”plus-circle”]ಜಾದಳಕಾಯಿ[/su_spoiler]

ಒಗಟುಗಳು Kannada Ogatugalu With Answer Riddle In Kannada
ಒಗಟುಗಳು Kannada Ogatugalu With Answer Riddle In Kannada
Kannadaquotes image download button

41. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ ನಾನ್ಯಾರು?
[su_spoiler title=”Answer” style=”fancy” icon=”plus-circle”]ಆಕಾಶ, ನಕ್ಷತ್ರ[/su_spoiler]

42. ಒಂದು ಮಡಕೆ, ಮಡಕೆಯೊಳಗೆ ಕುಡಿಕೆ, ಕುಡಿಕೆಯಲ್ಲಿ ಸಾಗರ
[su_spoiler title=”Answer” style=”fancy” icon=”plus-circle”]ತೆಂಗಿನ ಕಾಯಿ[/su_spoiler]

43. ಬಿಳಿ ಕುದುರೆಗೆ ಹಸಿರು ಬಾಲ ಇದು ಏನು?
[su_spoiler title=”Answer” style=”fancy” icon=”plus-circle”]ಮೂಲಂಗಿ[/su_spoiler]

44. ಬಿಳಿ ಸರದಾರನಿಗೆ ಕರಿ ಟೋಪಿ ನಾನ್ಯಾರು?
[su_spoiler title=”Answer” style=”fancy” icon=”plus-circle”]ಬೆಂಕಿಕಡ್ಡಿ[/su_spoiler]

45. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು ಇದು ಏನು?
[su_spoiler title=”Answer” style=”fancy” icon=”plus-circle”]ಬದನೆಕಾಯಿ[/su_spoiler]

Kannada ogatugalu with answer download free
Kannada ogatugalu with answer download free
Kannadaquotes image download button

46. ಸಾಗರ ಪುತ್ರ, ಸಾರಿನ ಮಿತ್ರ ನಾನ್ಯಾರು?
[su_spoiler title=”Answer” style=”fancy” icon=”plus-circle”]ಉಪ್ಪು[/su_spoiler]

47. ಗೂಡ್ನಲ್ಲಿರೋ ಜೋಡಿಪಕ್ಷಿ ಊರೆಲ್ಲ ನೋಡುತ್ತೆ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಕಣ್ಣು[/su_spoiler]

48. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದೇನು?
[su_spoiler title=”Answer” style=”fancy” icon=”plus-circle”]ಮೊಟ್ಟೆ[/su_spoiler]

Also Read : 40+ Basavanna vachanagalu in Kannada

49. ಬಿಳಿ ಕುದುರೆ ಹಸಿರು ಬಾಲ ಇದೇನು?
[su_spoiler title=”Answer” style=”fancy” icon=”plus-circle”]ಮೂಲಂಗಿ [/su_spoiler]

50. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ, ಅದಿಲ್ಲದೆ ಹಬ್ಬ ಹಾಗೋ ಹಾಗಿಲ್ಲ ಇದು ಏನು?
[su_spoiler title=”Answer” style=”fancy” icon=”plus-circle”]ಸಗಣಿ ಮಾವಿನ ತೋರಣ[/su_spoiler]

Answer ogatugalu in kannada language
Answer ogatugalu in kannada language
Kannadaquotes image download button

51. ಕಾಸಿನ ಕುದುರೆಗೆ ಬಾಲದ ಲಗಾಮು ನಾನ್ಯಾರು?
[su_spoiler title=”Answer” style=”fancy” icon=”plus-circle”]ಸೂಜಿ ದಾರ[/su_spoiler]

52. ಕಲ್ಲಿಲ್ಲದ ಬೆಟ್ಟ, ಮರಳಿಲ್ಲದ ಮರುಭೂಮಿ ನಾನ್ಯಾರು?
[su_spoiler title=”Answer” style=”fancy” icon=”plus-circle”]ನಕ್ಷೆ[/su_spoiler]

53. ಬಡ ಬಡ ಬಂದ, ಅಂಗಿ ಕಳಚಿದ, ಬಾವಿಯೊಳಗೆ ಬಿದ್ದ ಇದು ಏನು?
[su_spoiler title=”Answer” style=”fancy” icon=”plus-circle”]ಬಾಳೆ ಹಣ್ಣು[/su_spoiler]

54. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ. ನಾನ್ಯಾರು?
[su_spoiler title=”Answer” style=”fancy” icon=”plus-circle”]ನಕ್ಷತ್ರ[/su_spoiler]

55. ಕೊಳದ ಒಳಗೆ ಒಂದು ಮರ ಹುಟ್ಟಿ, ಬೇರು ಇಲ್ಲ, ನೀರು ಇಲ್ಲ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಎಣ್ಣೆ ದೀಪ[/su_spoiler]

Janapada ogatugalu with answer download
Janapada ogatugalu with answer download
Kannadaquotes image download button

56. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ ನಾನ್ಯಾರು?
[su_spoiler title=”Answer” style=”fancy” icon=”plus-circle”]ಸಾಬೂನು[/su_spoiler]

57. ಕಡಿದರೆ ಕಚ್ಚೋಕೆ ಆಗೋಲ್ಲ, ಹಿಡದ್ರೆ ಮುಟ್ಟೋಕೆ ಸಿಗೋಲ್ಲ ನಾನ್ಯಾರು?
[su_spoiler title=”Answer” style=”fancy” icon=”plus-circle”]ನೀರು[/su_spoiler]

58. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ ನಾನ್ಯಾರು?
[su_spoiler title=”Answer” style=”fancy” icon=”plus-circle”]ಹೇನು ಕೂದಲು[/su_spoiler]

59. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು. ನಾನ್ಯಾರು?
[su_spoiler title=”Answer” style=”fancy” icon=”plus-circle”]ಯುಗಾದಿ[/su_spoiler]

60. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಲೆಯಿಲ್ಲ, ಮೈ ಹಸಿರಾಗಿದೆ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಗಿಳಿ[/su_spoiler]

Kannada ogatugalu with answer
Kannada ogatugalu answer with images
Kannadaquotes image download button

61. ಆಕಾಶದೊಳಗಿನ ಗಿಣಿ, ಊಟದ ಹೊತ್ತಿಗೆ ರಾಣಿ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಬಾಳೆಲೆ[/su_spoiler]

62. ಒಂದು ಹಸ್ತಕ್ಕೆ ನೂರೆಂಟು ಬೆರಳು. ಇದು ಏನು?
[su_spoiler title=”Answer” style=”fancy” icon=”plus-circle”]ಬಾಳೆಗೊನೆ [/su_spoiler]

63. ಬಣ್ಣದ ಸೀರೆ ಉಟ್ಕೊಂಡು ಮಣ್ಣಾಗಿ ಕುಂತಾಳೆ ನಾನ್ಯಾರು?
[su_spoiler title=”Answer” style=”fancy” icon=”plus-circle”]ಕ್ಯಾರೆಟ್ [/su_spoiler]

64. ಹಗ್ಗ ಹಾಸಿದೆ ಹಸು ಮಲಗಿದೆ ಇದು ಏನು?
[su_spoiler title=”Answer” style=”fancy” icon=”plus-circle”]ಕುಂಬಳಕಾಯಿ [/su_spoiler]

65. ಇದ್ದಲು ನುಂಗುತ್ತ, ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ಇದು ಏನು?
[su_spoiler title=”Answer” style=”fancy” icon=”plus-circle”]ರೈಲು[/su_spoiler]

Kannada ogatugalu mattu uttara with images
Kannada ogatugalu mattu uttara with images
Kannadaquotes image download button

66. ಚಿಕ್ಕ ಮನೆಗೆ ಚಿನ್ನದ ಬೀಗ ಇದು ಏನು?
[su_spoiler title=”Answer” style=”fancy” icon=”plus-circle”]ಮೂಗುತಿ [/su_spoiler]

67. ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ.
[su_spoiler title=”Answer” style=”fancy” icon=”plus-circle”]ಇರುವೆ [/su_spoiler]

68. ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು, ಇದು ಏನು?
[su_spoiler title=”Answer” style=”fancy” icon=”plus-circle”]ಒಂದರಿ [/su_spoiler]

69. ನೀರುಂಟು ಬಾವಿಯಲ್ಲ, ಜುಟ್ಟುಂಟು ಪೂಜಾರಿಯಲ್ಲ, ಮೂರು ಕಣ್ಣುಂಟು ಶಿವನಲ್ಲ. ಇದು ಏನು?
[su_spoiler title=”Answer” style=”fancy” icon=”plus-circle”]ತೆಂಗಿನಕಾಯಿ [/su_spoiler]

70. ಕಿರೀಟವುಂಟು ರಾಜನಲ್ಲ, ಗಡ್ಡವುಂಟು ತಿರುಕನಲ್ಲ. ನಾನ್ಯಾರು?
[su_spoiler title=”Answer” style=”fancy” icon=”plus-circle”]ಹುಂಜ [/su_spoiler]

Ogatu Kannada ogatugalu with answer images
Ogatu kannada ogatugalu with answer images
Kannadaquotes image download button

71. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಇದು ಎಲ್ಲಿದೆ?
[su_spoiler title=”Answer” style=”fancy” icon=”plus-circle”]ನಕ್ಷೆ [/su_spoiler]

72. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ. ಇದು ಏನು?
[su_spoiler title=”Answer” style=”fancy” icon=”plus-circle”]ಬದನೆಕಾಯಿ [/su_spoiler]

73. ಸತ್ತವನೇ ಸಾವಿನ ಸುದ್ದಿ ತಗೊಂಡು ಹೋಗ್ತಾನೆ..
[su_spoiler title=”Answer” style=”fancy” icon=”plus-circle”]ಹಲಸಿನ ಹಣ್ಣು [/su_spoiler]

74. ಅಪ್ಪ ಅಪ್ಪ ಮರ ನೋಡು, ಮರದೊಳಗೆ ಎಲೆ ನೋಡು, ಎಳೆಯೊಳಗೆ ತೂತು ನೋಡು, ತೂತೊಳಗೆ ಮಾತು ನೋಡು. ಇದು ಏನು?
[su_spoiler title=”Answer” style=”fancy” icon=”plus-circle”]ಪುಸ್ತಕ [/su_spoiler]

75. ನೀರಿನಲ್ಲಿ ಹಾಕಿದರೆ ಮುಳುಗುವುದಿಲ್ಲ, ಬೆಂಕಿಯಲ್ಲಿ ಸುಡುವುದಿಲ್ಲ, ಕಲ್ಲಲ್ಲ! ಇದು ಇಲ್ಲದವರಿಲ್ಲ..
[su_spoiler title=”Answer” style=”fancy” icon=”plus-circle”]ನೆರಳು [/su_spoiler]

Kannada Ogatugalu Question With Answer
Kannada Ogatugalu Question with Answer
Kannadaquotes image download button

76. ಅಕ್ಷರಗಳಿದ್ದರೂ ಪುಸ್ತಕವಲ್ಲ, ಸಿಂಹವಿದ್ದರೂ ಅರಣ್ಯವಲ್ಲ, ದುಂಡಾಗಿದ್ದರೂ ಚಕ್ರವಲ್ಲ, ನಾನ್ಯಾರು?
[su_spoiler title=”Answer” style=”fancy” icon=”plus-circle”]ನಾಣ್ಯ [/su_spoiler]

77. ಹಾರುವುದು ಹಕ್ಕಿಯಲ್ಲ, ಕೊಂಬು ಉಂಟು ಗೂಳಿಯಲ್ಲ, ಬಾಲ ಉಂಟು ಕೋತಿಯಲ್ಲ. ಇದು ಏನು?
[su_spoiler title=”Answer” style=”fancy” icon=”plus-circle”]ಗಾಳಿಪಟ [/su_spoiler]

78. ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ.. ಇದು ಏನು?
[su_spoiler title=”Answer” style=”fancy” icon=”plus-circle”]ಗಡಿಯಾರ [/su_spoiler]

79. ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ, ಬೆನ್ನು ತೋಳುಂಟು ಮನುಷ್ಯನಲ್ಲ! ನಾನ್ಯಾರು?
[su_spoiler title=”Answer” style=”fancy” icon=”plus-circle”]ಕುರ್ಚಿ [/su_spoiler]

80. ಕಾಲಿಲ್ಲದೆ ನಡೆಯುವುದು, ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು.
[su_spoiler title=”Answer” style=”fancy” icon=”plus-circle”]ನದಿ [/su_spoiler]

Kannada Language Kannada Ogatugalu With Answer
Kannada Language Kannada Ogatugalu With Answer
Kannadaquotes image download button

81. ನಾಲ್ಕು ಕಾಲುಂಟು ಮೃಗವಲ್ಲ, ಹಾರೋದುಂಟು ಪಕ್ಷಿಯಲ್ಲ, ನಾನು ಕೂಸುಗಳನ್ನು ಪ್ರೀತಿಸುವ ಹಾಗೆ ಬೇರೆ ಯಾರು ಇಲ್ಲ….
[su_spoiler title=”Answer” style=”fancy” icon=”plus-circle”]ತೊಟ್ಟಿಲು [/su_spoiler]

82. ಊರಿಗೆಲ್ಲ ಒಂದೇ ಕಂಬಳಿ.
[su_spoiler title=”Answer” style=”fancy” icon=”plus-circle”]ಆಕಾಶ [/su_spoiler]

83. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ. ಇದು ಏನು?
[su_spoiler title=”Answer” style=”fancy” icon=”plus-circle”]ಕುಂಕುಮ [/su_spoiler]

84. ಹತ್ತಾರು ಮಕ್ಕಳ ತಂದೆ, ಅದಕ್ಕೆ ತಲೆಯ ಮೇಲೆ ಜುಟ್ಟು. ಇದು ಏನು?
[su_spoiler title=”Answer” style=”fancy” icon=”plus-circle”]ಹುಂಜ [/su_spoiler]

85. ಹಸಿರು ಕೋಟೆ, ಹಸಿರು ಕೋಟೆಯೊಳಗೆ ಬಿಳಿ ಕೋಟೆ, ಬಿಳಿ ಕೋಟೆಯೊಳಗೆ ಕೆಂಪುಕೋಟೆ, ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು. ಇದು ಏನು?
[su_spoiler title=”Answer” style=”fancy” icon=”plus-circle”]ಪರಂಗಿ ಹಣ್ಣು [/su_spoiler]

Ogatu answer ogatugalu in kannada download
Ogatu answer ogatugalu in kannada download
Kannadaquotes image download button

86. ಕೆಂಪು ಕುದುರೆ ಕರಿ ತಡಿ, ಒಬ್ಬ ಏರುತ್ತಾನೆ ಒಬ್ಬ ಇಳಿಯುತ್ತಾನೆ.
[su_spoiler title=”Answer” style=”fancy” icon=”plus-circle”]ರೊಟ್ಟಿ [/su_spoiler]

87. ಮೂವತ್ತೆರಡು ಜನ ಅಗಿತ್ತಾರೆ, ಒಬ್ಬ ರುಚಿ ನೋಡ್ತಾನೆ. ಇವರಿಬ್ಬರು ಯಾರು ಯಾರು?
[su_spoiler title=”Answer” style=”fancy” icon=”plus-circle”]ಹಲ್ಲು, ನಾಲಿಗೆ [/su_spoiler]

88. ಹೋದ ಕಡೆಯೆಲ್ಲ ಬರುವೆ, ಎಲ್ಲಿ ನೋಡಿದರೂ ಪತ್ತೆ ಇಲ್ಲ. ನಾನ್ಯಾರು?
[su_spoiler title=”Answer” style=”fancy” icon=”plus-circle”]ನೆರಳು [/su_spoiler]

89. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ.
[su_spoiler title=”Answer” style=”fancy” icon=”plus-circle”]ಭೂಪಟ [/su_spoiler]

90. ಅಣ್ಣ, ತಮ್ಮ ಇಬ್ಬರೂ ನಾ ಮುಂದೆ ತಾ ಮುಂದೆ ಎನ್ನುತ್ತಾರೆ. ಆದರೆ ಯಾರೂ ಮುಂದೆ ಹೋಗುವುದಿಲ್ಲ.
[su_spoiler title=”Answer” style=”fancy” icon=”plus-circle”]ಕಾಲುಗಳು [/su_spoiler]

Ogatu with Answer Riddles with images
Ogatu with Answer Riddles with images
Kannadaquotes image download button

91. ಒಂದು ಬಾವಿಯಲ್ಲಿ ಮೂವರು ಬಿದ್ದು ಸಾಯುತ್ತಾರೆ.
[su_spoiler title=”Answer” style=”fancy” icon=”plus-circle”]ಎಲೆ, ಅಡಿಕೆ, ಸುಣ್ಣ [/su_spoiler]

92. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ. ನಾನ್ಯಾರು ಹೇಳಿ?
[su_spoiler title=”Answer” style=”fancy” icon=”plus-circle”]ನಕ್ಷತ್ರ [/su_spoiler]

93. ಗೂಡಿನಲ್ಲಿನ ಪಕ್ಷಿ ನಾಡೆಲ್ಲಾ ನೋಡುವುದು.
[su_spoiler title=”Answer” style=”fancy” icon=”plus-circle”]ಕಣ್ಣು [/su_spoiler]

94. ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ.
[su_spoiler title=”Answer” style=”fancy” icon=”plus-circle”]ಗಾಳಿ [/su_spoiler]

95. ಒಂದು ಮಡಿಕೆ, ಮಡಿಕೆಯೊಳಗೆ ಕುಡಿಕೆ, ಕುಡಿಕೆಯಲ್ಲಿ ಸಾಗರ. ಇದು ಏನು?
[su_spoiler title=”Answer” style=”fancy” icon=”plus-circle”]ತೆಂಗಿನ ಕಾಯಿ [/su_spoiler]

Vagatu ogatu kannada ogatugalu with answer
Vagatu ogatu kannada ogatugalu with answer
Kannadaquotes image download button

96. ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ. 
[su_spoiler title=”Answer” style=”fancy” icon=”plus-circle”]ಗಡಿಯಾರ [/su_spoiler]

97. ಕಾಲಿಲ್ಲ, ಓಡುತ್ತದೆ. ತೋಳಿಲ್ಲ, ಈಜುತ್ತದೆ. ಇದು ಏನು?
[su_spoiler title=”Answer” style=”fancy” icon=”plus-circle”]ಹಾವು[/su_spoiler]

Continued….

Conclusion:

We hope the above collection of Kannada ogatugalu with answers are helpful for our readers. Our main intensions is to promote the Kannada riddles. If found helpful please share this site to your friends and family members.

Thank you.

This Post Has 8 Comments

      1. Gunashree M

        thank u it was just awesommmeeee…………………….

Leave a Reply